ಪ್ರಗತಿವಾಹಿನಿ ಸುದ್ದಿ: ದಂಪತಿ ಇಬ್ಬರೂ ಘಟಪ್ರಭಾ ನದಿಯ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಮಲ್ಲಪ್ಪ ಲಾಳಿ (55) ಹಾಗೂ ಪತ್ನಿ ಮಾದೇವಿ ಲಾಳಿ (50) ಮೃತರು. ಡೆತ್ ನೋತ್ ಬರೆದಿಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಗಾರರ ಕಿರುಕುಳಕ್ಕೆ, ಅವಮಾನಕ್ಕೆ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿ ಮೆಟಗುಡ್ಡದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸಾಲ ಮಾಡಿದ್ದರು. ಸಾಲಗಾರರು ಮನೆ ಬಳಿ ಬಂದು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ದಂಪತಿ ಡೆತ್ ನೋಟ್ ಬರೆದು ಯಾದವಾಡ ರಸ್ತೆಯಲ್ಲಿ ಘಟಪ್ರಭಾ ನದಿ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ