*ಹಿರಿಯ ನಟಿ ಪದ್ಮಾ ರಾವ್ ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್*
ಪ್ರಗತಿವಾಹಿನಿ ಸುದ್ದಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಪದ್ಮಜಾ ರಾವ್ ಅವರಿಗೆ ಬೆಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷರು, ದಂಡ ವಿಧಿಸಿದೆ.
ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ತನ್ನಿಂದ 40ಲಕ್ಷ ರೂ. ಹಣ ಪಡೆದು, ಆ ಬಳಿಕ ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು 2021ರಲ್ಲಿ ನಟಿ ಪದ್ಮಜಾ ರಾವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಹಂತ ಹಂತವಾಗಿ ಸುಮಾರು 40 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಸಾಲದ ಭದ್ರತೆಗೆ ಅವರು 40 ಲಕ್ಷ ರೂ.ನ ಚೆಕ್ ನೀಡಿದ್ದರು.
ಅದರೆ ಪದ್ಮಜಾ ಸಾಲ ಹಿಂತಿರುಗಿಸಿದ ಹಿನ್ನಲೆ ವೀರೇಂದ್ರ ಶೆಟ್ಟಿ ಚೆಕ್ ಮೂಲಕ ಹಣವನ್ನು ಪಡೆಯಲು ಬ್ಯಾಂಕ್ ಗೆ ತೆರಳಿದ್ದಾರೆ. ಈ ವೇಳೆ ಬ್ಯಾಂಕ್‌ನಲ್ಲಿ ಅಷ್ಟೊಂದು ಹಣವಿಲ್ಲದಿದ್ದರಿಂದ ಚೆಕ್ ಬೌನ್ಸ್ ಆಗಿತ್ತು. ಬಳಿಕ ವೀರೇಂದ್ರ ಶೆಟ್ಟಿ ಮಂಗಳೂರಿನ ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋದರು.
ಸಮನ್ಸ್ ಜಾರಿಯಾದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಪದ್ಮಜಾ ರಾವ್ ಅವರು ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ ಹಾಗೂ ಅವರಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ಹೇಳಿದರು.
ಅಲ್ಲದೇ ವೀರೇಂದ್ರ ಶೆಟ್ಟಿ ಯವರು ಪದ್ಮಜಾ ರಾವ್ ಗೆ ಯಾವುದೇ ಸಾಲ ನೀಡಿಲ್ಲ. ಯಾವುದೋ ವ್ಯಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆ. ವೀರೇಂದ್ರ ಅವರೇ ಪದ್ಮಜಾರ ಮನೆಯಿಂದ ಚೆಕ್ ಕದ್ದು ಅವರ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಪದ್ಮಜಾ ಪರ ವಕೀಲರು ವಾದಿಸಿದರು.
ಆದರೆ ಇದ್ಯಾವುದಕ್ಕೂ ಪೂರಕ ಪುರಾವೆ ಒದಗಿಸಲು ಪದ್ಮಜಾ ಪರ ವಕೀಲರು ವಿಫಲವಾದ ಕಾರಣ 8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ ಅವರು, ಪದ್ಮಜಾ ರಾವ್ ಅವರು ₹ 40.20 ಲಕ್ಷ ದಂಡ ಪಾವತಿಸಬೇಕು. ಅದರಲ್ಲಿ ₹ 40.17 ಲಕ್ಷವನ್ನು ದೂರುದಾರರಿಗೆ ನೀಡಬೇಕು. ಹಾಗೂ 73 ಸಾವಿರವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ