ಬೆಳಗಾವಿ ಜಿಲ್ಲಾಧಿಕಾರಿ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕೊರೋನಾ ಪಾಸಿಟಿವ್ ಧೃಢಪಟ್ಟ ವ್ಯಕ್ತಿಗಳು ಹೋಂ ಕ್ವಾರೆಂಟಿನಾಗಿರುವುದರಿಂದ ಮನೆಯ ಜನರಿಗೆಲ್ಲಾ ಸೋಂಕು ಹರಡುವ ಲಕ್ಷಣಗಳು ಗೋಚರಿಸುವುದರಿಂದ ಇದನ್ನು ತೆಡಗಟ್ಟುವ ಉದ್ದೇಶದಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಗಳ ಆಶೀರ್ವಾದ ಪಡೆದು ಯಡೂರು ಗ್ರಾಮದಲ್ಲಿ ಕಲ್ಯಾಣ ಮಂಟಪ ಮತ್ತು ಗಡಿ ಭವನದಲ್ಲಿ ಕೋವಿಡ್ ಸೆಂಟರ್ ಪ್ರಾರಂಭಿಸುವ ಸ್ಥಳ ಪರಿಶೀಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಕೋವಿಡ್ ಸೆಂಟರಗಳನ್ನು ಆರಂಭಿಸಿ ಗ್ರಾಮದಲ್ಲಿ ಕೊರೋನಾ ಸೋಂಕಿತರನ್ನು ಕಡ್ಡಾಯವಾಗಿ ಅಲ್ಲಿಯೇ ದಾಖಿಸಲಾಗುವುದು. ಈ ಕೋವಿಡ್ ಸೆಂಟರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು, ಸಿಬ್ಬಂದಿಗಳನ್ನು, ನರ್ಸಗಳನ್ನು ನೇಮಿಸಿ ಕೋವಿಡ್ ಸೇಂಟರಗಳಲ್ಲಿ ಒಳ್ಳೆಯ ಗಾಳಿ, ನೀರು ಸೇರಿದಂತೆ ಒಳ್ಳೆಯ ವೈದ್ಯಕೀಯ ಉಪಚಾರವನ್ನು ನೀಡಲಾಗುವುದು. ಕೊರೋನಾ ಪಾಸಿಟಿವ್ ಧೃಢಪಟ್ಟ ವ್ಯಕ್ತಿಗಳು ಹೋಂ ಕ್ವಾರೆಂಟಿನಾಗಿರುವುದರಿಂದ ಮನೆಯ ಜನರಿಗೆಲ್ಲಾ ಹಾಗೂ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವ ಲಕ್ಷಣಗಳು ಗೋಚರಿಸುವುದರಿಂದ ಇದನ್ನು ತೆಡಗಟ್ಟುವ ಉದ್ದೇಶದಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಕೋವಿಡ್ ಸೆಂಟರಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ತಿಳಿಸಿದರು.
ಈ ವೇಳೆ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಉಂಟಾಗಿರುವ ಕೋರೋನಾ ಮಹಾಮಾರಿಯನ್ನು ತಡೆಗಟ್ಟಲು ಎಲ್ಲ ಮಠಮಾನ್ಯಗಳು ಕೈಜೋಡಿಸುವ ಸಲುವಾಗಿ ನಾವು ಕೂಡ ನಮ್ಮ ಅಧೀನದಲ್ಲಿರುವ ಕಲ್ಯಾಣ ಮಂಟಪ, ಗಡಿ ಭವನ ಹಾಗೂ ದಾವಣಗೆರೆಯಲ್ಲಿರುವ ನಮ್ಮ ಶಾಲೆಯ ಎಲ್ಲ ಕೋಣೆಗಳನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿ ಪಂ ಸಿ ಇ ಒ ಹೆಚ್ ದರ್ಶನ, ಉಪವಿಭಾಗಾಧಿಕಾರಿ ಯುಕೇಶಕುಮಾರ, ಡಿ ಎಚ್ ಒ ಎಸ್ ಎಸ್ ಮುನ್ಯಾಳ, ತಹಶಿಲ್ದಾರ ಪ್ರವೀಣ ಜೈನ್, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ದೇಸಾಯಿ, ಯಡೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಹುಲ್ ದೇಸಾಯಿ, ಎಲ್ ಬಿ ಸೂರ್ಯವಂಶಿ ಸೋಶಿಯಲ್ ಫೌಂಡೇಶನ್ ಅಧ್ಯಕ್ಷರಾದ ಅಜಯ್ ಸೂರ್ಯವಂಶಿ, ಗ್ರಾಮ ಪಂಚಾಯಿತಿಯ ಸದಸ್ಯರಾದ ಪ್ರಶಾಂತ ಉಮರಾಣಿ, ಶ್ರೀಕಾಂತ್ ಉಮರಾಣಿ, ಅಜಿತ್ ಕಿಲ್ಲೆದರ್, ಶೌಕತ್ ಲಾಟಕರ, ಪಿಂಟು ಚಿಕ್ಕೊರುಡೇ ಸೇರಿದಂತೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಧಿಕಾರಿಗಳು ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೋವಿಡ್ ನಿಂದ ಅನಾಥರಾದ ಮಕ್ಕಳಿಗಾಗಿ ವಿಶೇಷ ಯೋಜನೆ ಘೋಷಿಸಿದ ಶಶಿಕಲಾ ಜೊಲ್ಲೆ
ಕೇಂದ್ರ ರಕ್ಷಣಾ ಸಚಿವರಿಗೆ ಡಿಸಿಎಂ ಸವದಿ ಮಹತ್ವದ ಪತ್ರ
ಸಿದ್ದೇಶ್ವರ ಸ್ವಾಮಿಗಳ ಪ್ರೇರಣೆ: ತಮ್ಮ ಮನೆಯನ್ನೇ ಕೋವಿಡ್ ಕೇರ್ ಸೆಂಟರ್ ಮಾಡಿದ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ