34 ಜನರಲ್ಲಿ JN.1 ರೂಪಾಂತರಿ ಸೋಂಕು ಪತ್ತೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ರೂಪಾಂತರಿ ವೈರಸ್ ಗಣನೀಯವಗಿ ಹೆಚ್ಚುತ್ತಿದ್ದು, ಕಟ್ಟೆಚ್ಚರ ವಹಿಸುವಂತೆ ಆರೋಗ ಇಲಾಖೆ ಸೂಚಿಸಿದೆ.
ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪಸಮಿತಿ ಸಭೆ ನಡೆಯಿತು. ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈವರೆಗೆ ರಾಜ್ಯದಲ್ಲಿ 7 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಕೋವಿಡ್ ರೂಪಾಂತರಿ JN.1 ಸೋಂಕು ಕೂಡ ಪತ್ತೆಯಾಗುತ್ತಿದ್ದು, 60 ಸ್ಯಾಂಪಲ್ ಗಳಲ್ಲಿ 34 ಜನರಲ್ಲಿ JN.1 ಸೋಂಕು ದೃಢಪಟ್ಟಿದೆ. ಟೆಸ್ಟಿಂಗ್ ಹೆಚ್ಚಿಸಿದಷ್ಟು ಸೋಂಕು ಹರಡುವಿಕೆಯ ಪ್ರಮಾಣ ಗುತ್ತಾಗುತ್ತದೆ. ಹಾಗಾಗಿ ಇಂದಿನಿಂದ ಪ್ರತಿ ದಿನ 5 ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದರು.
ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ತೆರೆಯಲಾಗಿದೆ. ಕೊರಿನಾ ಸೋಂಕಿತರನ್ನು ಕಡ್ಡಾಯವಾಗಿ ಒಂದು ವಾರ ಹೋಂ ಐಸೋಲೇಷನ್ ಮಾಡಬೇಕು. ಹೋಮ್ ಐಸೋಲೇಟ್ ಆದವರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಮಾಸ್ಕ್ ಕಡ್ಡಾಯ ಮಾಡಿಲ್ಲ ಆದರೆ ಎಲ್ಲರೂ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಸಲಹೆ ಕೊಡುತ್ತೇವೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ