ಗರ್ಭದಲ್ಲಿರುವ ಶಿಶುಗಳ ಮೆದುಳಿಗೇ ಹಾನಿ ತಂದ ಕೋವಿಡ್-19

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಗರ್ಭದಲ್ಲಿದ್ದಾಗಲೇ ಕೋವಿಡ್ ಸೋಂಕಿಗೆ ತುತ್ತಾದ ಶಿಶುಗಳು ಮೆದುಳಿನ ಹಾನಿ ಅನುಭವಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

SARS-CoV-2 ವೈರಸ್ ತಾಯಿಯ ಗರ್ಭ ಪ್ರವೇಶಿಸಿ ಶಿಶುವಿನ ಮೆದುಳಿನ ಹಾನಿಯನ್ನುಂಟುಮಾಡಿರುವ ಮೊದಲ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಯುಎಸ್ ನ ಮಿಯಾಮಿ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನೆಗಳು ಹೇಳಿವೆ.

ಡೆಲ್ಟಾ ಅಲೆಯ ಸಂದರ್ಭದಲ್ಲಿ ಈ ತಾಯಂದಿರು ಸೋಂಕಿಗೆ ಒಳಗಾಗಿದ್ದರು. ಆದರೆ ಅವರ ನವಜಾತ ಶಿಶುಗಳು ರೋಗಗ್ರಸ್ತವಾಗಿದ್ದವು. ಈ ಪೈಕಿ ಒಂದು ಮಗು ಜನಿಸಿದ 13 ತಿಂಗಳಲ್ಲಿ ಸಾವು ಕಂಡಿತ್ತು. ಇನ್ನೊಂದು ಮಗುವನ್ನು ಸಂಶೋಧಕರು ಹೇಳಿದ್ದಾರೆ.

ಆದಾಗ್ಯೂ, ಈ ಸ್ಥಿತಿಯು ಕೊರೊನಾ ವೈರಸ್ ಡೆಲ್ಟಾ ರೂಪಾಂತರಿಯಿಂದ ಆಗಿದೆಯೇ ಅಥವಾ ಒಮಿಕ್ರಾನ್ ರೂಪಾಂತರಿಗಳಿಂದ ಆಗುತ್ತಿದೆಯೇ ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ವಿಶ್ವವಿದ್ಯಾನಿಲಯದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಶಹನಾಜ್ ದುವಾರಾ ಮಾತನಾಡಿ, “ಇಂತಹ ಪ್ರಕರಣಗಳು ಅಪರೂಪವಾದರೂ, ಗರ್ಭಾವಸ್ಥೆಯಲ್ಲಿ ಸೋಂಕಿಗೆ ಒಳಗಾದ ಮಹಿಳೆಯರು ಮಗುವಿನ ಬೆಳವಣಿಗೆಯ ವಿಳಂಬವನ್ನು ಪರಿಶೀಲಿಸಲು ಮಕ್ಕಳ ವೈದ್ಯರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.

https://pragati.taskdun.com/karnatakahavy-rain3-daysimd/
https://pragati.taskdun.com/congress-has-get-publicity-in-the-name-of-garib-kalyan-bjp-has-worked-and-shown-murugesh-nirani/
https://pragati.taskdun.com/this-is-not-a-plea-but-a-warning/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button