Latest

ಕೋವಿಡ್ ನಿಂದ ಗುಣಮುಖರಾದವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದೇ? ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು 6 ವಾರಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಾರದು ಎಂದು ಐಸಿಎಂಆರ್ ಮಹತ್ವದ ಸಲಹೆ ನೀಡಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗಲು 6 ವಾರ ಕಾಲ ಕಾಯಲೇಬೇಕು. ಕೋವಿಡ್ ನಿಂದ ಗುಣಮುಖರಾದ 102 ದಿನಗಳವರೆಗೆ ಪದೇ ಪದೇ ಆರ್ ಟಿಪಿಸಿಆರ್ ಟೆಸ್ಟ್ ಬೇಡ. ಗುಣಮುಖರಾದ ವ್ಯಕ್ತಿಯ ದೇಹದಲ್ಲಿ 102 ದಿನಗಳವರೆ ಸತ್ತ ವೈರಸ್ ಕಣಗಳಿರುತ್ತವೆ. ಇದು ದೇಹದಿಂದ ಸಂಪೂರ್ಣ ಹೋಗಬೇಕಾದರೆ 102 ದಿನಗಳ ಅಗತ್ಯವಿದೆ. ಹಾಗಾಗಿ ಪದೇ ಪದೇ ಟೆಸ್ಟ್ ಬೇಡ ಎಂದು ಹೇಳಿದರು.

ವೈದ್ಯರು ಕೊರೊನಾದಿಂದ ಗುಣಮುಖರಾದವರಿಗೆ 6 ವಾರಗಳ ನಂತರ ಶಸ್ತ್ರಚಿಕಿತ್ಸೆಯನ್ನು ಪರಿಗಣಿಸುವುದು ಉತ್ತಮ. ಒಂದುವೇಳೆ ಸರ್ಜರಿ ಮಾಡಿಸಿಕೊಳ್ಳದಿದ್ದರೆ ಜೀವಕ್ಕೆ ಅಪಾಯ ಎಂಬ ಸಂದರ್ಭವಿದ್ದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಅಗತ್ಯ ಎಂದು ಸಲಹೆ ನೀಡಿದೆ.
ಒಂದೇ ಜಿಲ್ಲೆಯ 8,000 ಮಕ್ಕಳಲ್ಲಿ ಕೊರೊನಾ

Home add -Advt

Related Articles

Back to top button