ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೊವಿಡ್-೧೯ ಪ್ರವಾಸೋದ್ಯಮ ವಲಯಕ್ಕೆ ತೀವ್ರವಾದ ಹೊಡೆತವನ್ನು ನೀಡಿದ್ದು, ಇದರಿಂದ ಅಪಾರವಾದ ನಷ್ಟವನ್ನು ಅನುಭವಿಸಿದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ.
ಈ ಪ್ರಸ್ತುತ ಆರ್ಥಿಕ ವರ್ಷವು ಮುಕ್ತಾಯಗೊಳ್ಳುತ್ತಿರುವುದರಿಂದ ಸರ್ಕಾರವು ನೀಡಲಿರುವ ಕೋವಿಡ್ ರಿಲೀಫ್ ಪ್ಯಾಕೇಜ್ ಅನ್ನು ಪಡೆಯಲು ಪ್ರವಾಸೋದ್ಯಮ ಇಲಾಖೆಯು ನೊಂದಣಿ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು ಮಾರ್ಚ್ ೪ ರಂದು ಬೆಳಗಾವಿಯ ರಾಮದೇವ ಹೋಟೇಲ್‌ನಲ್ಲಿ ನೊಂದಣಿ ಶಿಬಿರವನ್ನು ಹಮ್ಮಿಕೊಂಡಿದೆ.
೨೦೨೧-೨೨ನೇ ಹಣಕಾಸಿನ ವರ್ಷದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‌ಗಳ ಶೇ.೫೦. ಆಸ್ತಿ ತೆರಿಗೆಯನ್ನು ಮಾತ್ರ ಪಾವತಿ ಮಾಡಬೇಕಿದ್ದು, ಉಳಿದ ಶೇ.೫೦. ರಷ್ಟನ್ನು ರಿಯಾಯಿತಿ ಹಾಗೂ ಎಪ್ರಿಲ್, ಮೇ, ಜೂನ್-೨೦೨೧ ತಿಂಗಳಲ್ಲಿ ವಿದ್ಯುತ್ ಶಕ್ತಿ ಡಿಮಾಂಡ್/ಪಿಕ್ಸಡ್ ಶುಲ್ಕವನ್ನು ಪಾವತಿ ಮಾಡುವದರಿಂದ ವಿನಾಯಿತಿ ನೀಡಲಾಗಿದೆ.
ಈ ವಿನಾಯಿತಿ ಪಡೆಯಲು ಇಲಾಖೆಯ ಅಧಿಕೃತ ಜಾಲತಾಣವಾದ http://www.karnatakatourism.org ಮೂಲಕ KTT ಈ ಅಡಿ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ನೊಂದಣ ವಿಶೇಷ ಶುಲ್ಕ ೫೦೦ ರೂ.ಗಳನ್ನು ಮಾತ್ರ ನಿಗದಿಗೊಳಿಸಿ, ಪರವಾನಗಿ ಅವಧಿಯನ್ನು ೫ ವರ್ಷಗಳವರೆಗೆ ವಿಸ್ತರಿಸಿ ಇಲಾಖೆಯಿಂದ ಪರವಾನಗಿ ನೀಡಲಾಗುತ್ತಿರುತ್ತದೆ.
ಈ ಶಿಬಿರದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‌ಗಳ ಮಾಲೀಕರು ಪಾಲ್ಗೊಂಡು ತಮ್ಮ ಸಂಸ್ಥೆಗಳ ನೊಂದಣಿಯನ್ನು ಇಲಾಖೆಯಲ್ಲಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೭೦೮೭೯ ಹಾಗೂ ಮೊಬೈಲd ನಂಬರ್: ೯೫೯೧೭೭೮೮೨೪ ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನೀಯರ ಪ್ರಾಣ ಉಳಿಸಿದ ಭಾರತದ ರಾಷ್ಟ್ರ ಧ್ವಜ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ