Latest

ಕೋವಿಡ್ ನಿರ್ಬಂಧದ ವಿರುದ್ಧ ಬಿಕಿನಿಯಲ್ಲಿ ಪ್ರತಿಭಟಿಸಿದ ಡಿ.ಜೆ

ಪ್ರಗತಿವಾಹಿನಿ ಸುದ್ದಿ; ಜಕಾರ್ತ್: ಕೋವಿಡ್ ನಿಯಂತ್ರಣಕ್ಕೆ ಇಂಡೋನೇಷ್ಯಾದಲ್ಲಿ ಜಾರಿಯಾಗಿರುವ ನಿರ್ಬಂಧ ವಿರೋಧಿಸಿ ಡಿ.ಜೆ.ಯೊಬ್ಬರು ಬಿಕಿನಿ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

28 ವರ್ಷದ ಡಿ.ಜೆ. ಡಿನಾರ್ ಕ್ಯಾಂಡೆ ಸರ್ಕಾರದ ಸಂಚಾರ ನಿರ್ಬಂಧ ವಿರೋಧಿಸಿ ಬಿಕಿನಿ ಧರಿಸಿ ರಸ್ತೆ ಮೇಲೆ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಭಟನೆ ಭಾರಿ ವೈರಲ್ ಆಗಿತ್ತು.

ಇಂಡೋನೇಷ್ಯಾದಲ್ಲಿ ಕಠಿಣ ವಸ್ತ್ರಸಂಹಿಂತೆ ಜಾರಿಯಲ್ಲಿದ್ದು, ಆದಾಗ್ಯೂ ಸರ್ಕಾರ ವಿಧಿಸಿರುವ ಕೋವಿಡ್ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಡಿನಾರ್ ಬಿಕಿನಿಯಲ್ಲಿ ಧರಣಿ ನಡೆಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಇದು ಅಶ್ಲೀಲ ಪ್ರಕರಣ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button