ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೊರೊನಾ ಮೂರನೆ ಅಲೆ ರಾಜ್ಯದಲ್ಲಿ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಅನುಮಾನ ಆರಂಭವಾಗಿದೆ. ಮೂರನೆ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ಎನ್ನಲಾಗಿದೆ. ಈ ನಡುವೆ ರಾಜ್ಯದಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೋವಿಡ್ ಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ . ಈ ನಡುವೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 2 ವರ್ಷದ ಗಂಡುಮಗು ಮಹಾಮಾರಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಬೆಳಕಿಗೆ ಬಂದಿದೆ.
ಮಗುವನ್ನು ಜೂನ್ 17ರಂದು ಕೆ ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದೆ.
ಮಗು ಆಸ್ಪತ್ರೆಗೆ ದಾಖಲಿಸಿದ್ದ ವೇಳೆಯೇ ಮುಗುವುಗೆ ಪಾಸಿಟೀವ್ ಬಂದಿತ್ತು ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ ಎಂದು ಡಿ.ಹೆಚ್ ಒ ಡಾ.ನಾಗಭೂಷಣ ತಿಳಿಸಿದ್ದಾರೆ.
ಸಧ್ಯಕ್ಕೆ ಕಾಲೇಜು ಮಾತ್ರ ಆರಂಭ, ಅದಕ್ಕೂ ಷರತ್ತು: ವಿವರಣೆ ನೀಡಿದ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ