
ಪ್ರಗತಿವಾಹಿನಿ ಸುದ್ದಿ, ಮುರಗೋಡ (ಸವದತ್ತಿ) – ಗೋವನ್ನು ಮಾತೆ ಎಂದು ಕರೆಯುತ್ತೇವೆ, ಕಾಮಧೇನು ಎಂದು ಪೂಜಿಸುತ್ತೇವೆ. ಪುರಾಣ ಕಾಲದಿಂದಲೂ ಸಮಾಜದಲ್ಲಿ ಗೋವಿಗೆ ಪೂಜನೀಯ ಸ್ಥಾನ ನೀಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಮಕರ ಸಂಕ್ರಾಂತಿಯ ಪ್ರಯುಕ್ತ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಗೋಮಾತೆಯ ಪೂಜಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗೋವಿಿಗೆ ಪ್ರಪದಕ್ಷಿಣೆ ಹಾಕಿದರೆ ದೇವಾನುದೇವತೆಗಳಿಗೆ ಪ್ರದಕ್ಷಿಣೆ ಮಾಡಿದ್ದಕ್ಕೆ ಸಮಾನ ಎನ್ನುತ್ತಾರೆ. ಗೋವಿನ ಮೂತ್ರ, ಸೆಗಣಿ ಅತ್ಯಂತ ಪವಿತ್ರವಾದ್ದು. ಅಂತಹ ಗೋವಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಸುಧೈವ ಎಂದು ಅವರು ಹೇಳಿದರು.
ಮುರಗೋಡ ಮಹಾಂತ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯು. ಬಿ. ಉಳವಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ, ಉದ್ಯಮಿ ಶಿವರಂಜನ ಬೋಳಣ್ಣವರ, ಮಹಾಂತೇಶ ಮತ್ತಿಕೊಪ್ಪ, ಡಾ. ಚಂದ್ರಶೇಖರ, ಬಸವರಾಜ ಭಗಾಡೆ, ಡಾ. ಪ್ರಮೋದ್ ಮೂಡಲಗಿ, ಡಾ. ಕೋಲಾರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ