Latest

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ; ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಭ್ರಮ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಯುಕ್ತ ಮಹಾರಾಷ್ಟ್ರ ಚೌಕ ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತ್ರತ್ವದಲ್ಲಿ ವ್ಯಾಪಾರಿಗಳು, ಸಮಾಜದ ಪ್ರಮುಖರು ಕೂಡಿ ಕರ್ನಾಟಕದ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ವಿಷಯ ಸಂತೋಷದಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ರಾಜೇಂದ್ರ ಜೈನ ಮಾತನಾಡಿ ಬಹಳ ವರ್ಷಗಳ ಗೋ ಪ್ರೇಮಿಗಳ ಕನಸು ನನಸಾಯ್ತು ಸಹಕರಿಸಿದ ಬಾಜಪಾ ಸರಕಾರಕ್ಕೆ ಅಭಿನಂದನೆಗಳು ಎಂದರು.ಡಾ ಭಾಗೋಜೀ, ಕೃಷ್ಣ ಭಟ್, ವಿಜಯ ಜಾದವ ಮಾತನಾಡಿ ಬಹು ದಿನದ ವಿಶ್ವ ಹಿಂದು ಪರಿಷತ್ ಬಜರಂಗದಳದ ಹೋರಾಟ,ಬಲಿದಾನ ವ್ಯರ್ಥವಾಗದೇ ಗೋ ಹತ್ಯೆ ನಿಷೇಧ ಹಿಂದು ಸಮಾಜದ ವಿಜಯ, ಸದಾ ಹಿಂದು ಸಮಾಜ ಒಂದಾಗಿ, ಭಾಷೆ,ಜಾತಿ, ಪ್ರಾಂತ ಎಂದು ಜಗಳವಾಡದೇ ಕೇವಲ ರಾಷ್ಟ್ರದ ಒಳಿತಾಗಾಗಿ ಒಂದಾಗಿ ಕೆಲಸ ಮಾಡಿ, ಹಿಂದು ಪರ ಸರಕಾರ ಇರುವಂತೆ, ಹಿಂದು ಗಳು ಒಂದಾಗಿ ಒಗ್ಗಟ್ಟಿನಿಂದ ಇದ್ದಾಗ ಈ ರೀತಿ ಕಾಯ್ದೆ ಜಾರಿ ಆಗಲು ಸಾಧ್ಯ ಅಂದರು. ನಾವು ಎಂದೆಂದೂ ಗೋವನ್ನ ರಕ್ಷಿಸಲು ಬುಧ್ಧ, ಕಾಮಧೇನು ಆದ ಪರಮಾತ್ಮ ಸ್ವರೂಪಿ ಗೋವಿನ ವಧೆ ನಿಲ್ಲಲು ಸಹಾಯವಾಗಲು ಈ ಕಾಯ್ದೆ ಉಪಕಾರಿ. ಈರ್ವರು ಸ್ವಾಮೀಜಿಗಳು ಈ ಕಾಯ್ದೆ ತಂದ ಎಲ್ಲಾ ಸಹಕಾರಿಗಳಗೆ,ಮುಖ್ಯಮಂತ್ರಿ ಯಡ್ಯೂರಪ್ಪನವರಿಗೆ ಹೋರಾಟ ಮಾಡಿದ ವಿಶ್ವ ಹಿಂದು ಪರಿಷತ್ ಗೆ ಅಭಿನಂದನೆಗಳು ಸದಾ ನಾವು ಈ ಪುಣ್ಯ ಕಾರ್ಯದಲ್ಲಿ ಬಾಗಿ ಆಗುತ್ತೇವೆ ಎಂದು ಆಶೀರ್ವಾದಿಸಿದರು.

ರಾಜೇಂದ್ರ ಜೈನ, ಪ್ರಾಣೀದಯಾ ಅಧ್ಯಕ್ಷರು ಬೆಳಗಾವಿ ಜಿಲ್ಲೆ. ಕ್ರಷ್ಣ ಭಟ್ ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕೋಶಾಧ್ಯಕ್ಷ ರು,ಶ್ರೀಕಾಂತ ಕದಮ್ ಜಿಲ್ಲಾ ಅಧ್ಯಕ್ಷರು, ಡಾ ಭಾಗೋಜೀ ಅಧ್ಯಕ್ಷರು,ವಿಜಯ ಜಾದವ ಜಿಲ್ಲಾ ಸೆಕ್ರೆಟರಿ, ಬಾವಕಣ್ಣ ಲೋಹಾರ ಬಜರಂಗದಳ ಜಿಲ್ಲಾ ಸಂಯೋಜಕರು, ಆದಿನಾಥ ಗಾವಡೆ ನಗರ ಬಜರಂಗದಳದ ಸಂಯೋಜಕರು, ಬಸವರಾಜ ಹಳಂಗಳಿ, ಆನಂದ ಕರಲಿಂಗನವರ್, ಮುಂತಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button