Latest

ಶಾಹಿದ್ ಆಫ್ರಿದಿಗೆ ಜಾಲತಾಣದಲ್ಲಿ ಕುಟುಕಿದ ಅಮಿತ್ ಮಿಶ್ರಾ

ಪ್ರಗತಿವಾಹಿನಿ ಸುದ್ದಿ, ಮುಂಬೈ: ವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಹಿರಿಯ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಜಾಲತಾಣದಲ್ಲಿ ಕುಟುಕಿದ್ದಾರೆ.

“ವಿರಾಟ್ ಕೊಹ್ಲಿ ಉನ್ನತ ಮಟ್ಟದಲ್ಲಿ ನಿವೃತ್ತಿ ಹೊಂದಬೇಕೇ ಹೊರತು ಅವರನ್ನು ಕೈಬಿಟ್ಟಾಗ ಅಲ್ಲ” ಎಂದು ಆಫ್ರಿದಿ ಹೇಳಿದ್ದಾರೆ.

“ಪ್ರಿಯ ಅಫ್ರಿದಿ…ಕೆಲವರು ಒಮ್ಮೆ ಮಾತ್ರ ನಿವೃತ್ತಿ ಹೊಂದುತ್ತಾರೆ. ಆದ್ದರಿಂದ ದಯವಿಟ್ಟು ವಿರಾಟ್ ಕೊಹ್ಲಿಯನ್ನು ಇವೆಲ್ಲವುಗಳಿಂದ ತಪ್ಪಿಸಿ” ಎಂದು ಮಿಶ್ರಾ ನಯವಾದ ಸಲಹೆ ಮೂಲಕ ವ್ಯಂಗ್ಯವಾಡಿದ್ದಾರೆ.

ಶಾಹಿದ್ ಅಫ್ರಿದಿ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬಾರಿ ನಿವೃತ್ತಿ ಘೋಷಿಸಿ ಅದನ್ನು ಪೂರೈಸದ ಕಾರಣಕ್ಕೆ ಟೀಕೆಗಳಿಗೆ ಗುರಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದ ಭಾರತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button