Advertisement -Home Add
Crease wise New Design
Jarkiholi Parents Add

4 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

ಖಡೇಬಜಾರ ಠಾಣೆ ಪೊಲೀಸ್‌ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಖಡೇಬಜಾರ್ ಠಾಣೆ ಪೊಲಿಸರು ಸುಮಾರು 4 ಲಕ್ಷ ರೂ.  ಮೌಲ್ಯದ ಗಂಧದ ಮರದ ಕಟ್ಟಿಗೆ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಗುಡ್‌ಶೆಡ್ ರೋಡ್ ೪ನೇ ಕ್ರಾಸ್‌ದಲ್ಲಿ  ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಯ ತುಂಡುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ  ಎಂ.ಪಿ. ಸರವ್ವಗೋಳ ಪಿಐ ಖಡೇಬಜಾರ ಠಾಣೆ ಹಾಗೂ ಅವರ ಠಾಣೆಯ ಸಿಬ್ಬಂದಿಯವರಾದ ಸಿಎಚ್‌ಸಿ-ಶಂಕರ ಶಿಂಧೆ, ವಿಜಯ ಕಂಟೀಕರ, ಬಿ.ಎ.ನೌಕುಡಿ ಸಿಪಿಸಿ-ಬಿ.ಪಿ.ಉಜ್ಜಿನಕೊಪ್ಪ, ಪ್ರಕಾಶ ಸನಮನಿ ರವರನ್ನೊಳಗೊಂಡ ತಂಡ ಕಾರ್ಯಾಚಾರಣೆ ನಡೆಸಿತು.

ವಿಶಾಲ ಹನಮಂತ ಬೆಲೆಕರ (೨೫) (ಸಾ|| ಬೆಲೆಕರ ಗಲ್ಲಿ ಗಳತಗಾ ಭೀಮಾಪೂರವಾಡಿ ತಾಃ ಚಿಕ್ಕೋಡಿ ಹಾಲಿ ಸರ್ವೋದಯ ಪುಡ್ ಇಂಡಸ್ಟ್ರೀಸ್ ಟಾಟಾ ಪಾವರ ಸಮೀಪ ಅಟೋನಗರ ಬೆಳಗಾವಿ) ನನ್ನು ವಶಕ್ಕೆ ಪಡೆದುಕೊಂಡು ಕೂಲಂಕಷವಾಗಿ ವಿಚಾರಣೆಗೊಳಪಡಿಸಿ ಇವರಿಂದ ಸುಮಾರು 4 ಲಕ್ಷ ರೂ ಕಿಮ್ಮತ್ತಿನ ಶ್ರೀಗಂಧದ ಮರದ ಕಟ್ಟಿಗೆಯ ತುಂಡುಗಳು -8 ಒಟ್ಟು ತೂಕ 20 ಕೆಜಿ 37 ಗ್ರಾಂ ಹಾಗೂ ರೂ.200 ನಗದು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.