Latest

ಮಹಾರಾಷ್ಟ್ರದಲ್ಲಿ ಕೊರೋನಾಕ್ಕೆ 57 ಪೊಲೀಸರು ಬಲಿ

ಪ್ರಗತಿವಾಹಿನಿ ಸುದ್ದಿ, ಮುಂಬೈ  – ಕಳೆದ 24 ಗಂಟೆಯಲ್ಲಿ ಮತ್ತೆ 8 ಪೊಲೀಸರು ಬಲಿಯಾಗುವ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾಕ್ಕೆ ಬಲಿಯಾದ ಪೊಲೀಸರ ಸಂಖ್ಯೆ 57ಕ್ಕೇರಿದೆ.

ಮಹಾರಾಷ್ಟ್ರ ಅದರಲ್ಲೂ ಮುಂಬೈಯಲ್ಲಿ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಕೊರೋನಾ ವ್ಯಾಪಿಸುತ್ತಿದೆ. ರಾಜ್ಯದ ಹಲವೆಡೆ ಪೊಲೀಸರಿಗೆ ಸೋಂಕು ತಗುಲಿದೆ. ಮುಂಬೈನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ.

ಕಂಟೈನ್ಮಂಟ್ ಝೋನ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕಾಗುತ್ತಿದೆ. ವಿಪರ್ಯಾಸವೆಂದರೆ ಲಾಕ್ ಡೌನ್ ಸಂದರ್ಭದಲ್ಲೂ ಮಹಾರಷ್ಟ್ರದಲ್ಲಿ ಕಠಿಣ ಕ್ರಮಕೈಗೊಳ್ಳದಿರುವುದು. ಜನ ಮತ್ತು ವಾಹನ ಸಂಚಾರ ಯಾವ ತಡೆಯಿಲ್ಲದೆ ನಡೆದಿದೆ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ.

ಇಡೀ ಮಹಾರಾಷ್ಟ್ರ ಕೊರೋನಾದಿಂದಾಗಿ ನಲುಗಿಹೋಗಿದೆ. ಕರ್ನಾಟಕದ ಸೇರಿದಂತೆ ಬೇರೆ ಹಲವು ರಾಜ್ಯಗಳಿಗೆ ಕೂಡ ಮಹಾರಾಷ್ಟ್ರದಿಂದಲೇ ಸೋಂಕು ಹರಡುತ್ತಿದೆ.

Home add -Advt

ಕರ್ನಾಟಕದಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಎಲ್ಲ ರೀತಿಯ ಸುರಕ್ಷತೆ ಕ್ರಮ ತಗೆದುಕೊಳ್ಳುವಂತೆ ಪ್ರಗತಿವಾಹಿನಿ ಮನವಿ ಮಾಡುತ್ತದೆ.

Related Articles

Back to top button