Advertisement -Home Add

ಪೊಲೀಸ್ ಪರೀಕ್ಷೆಗೆ ಕುಳಿತ ನಕಲಿ ಅಭ್ಯರ್ಥಿಗಳು ಜೈಲಿಗೆ

ನಾಲ್ವರನ್ನು ಜೈಲಿಗೆ ಕಳಿಸಿದ ಪೊಲೀಸರು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ೩೯ ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ/ ಐಆರ್‌ಬಿ/ ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ. ಲಿಖಿತ ಪರೀಕ್ಷೆಯಲ್ಲಿ ನಾಲ್ವರು ನಕಲಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.

ದಿನಾಂಕ.೨೨-೧೧-೨೦೨೦ ರಂದು ಬೆಳಿಗ್ಗೆ ೧೧ ಗಂಟೆಯಿಂದ ೧೨.೩೦ ಗಂಟೆಯವರೆಗೆ ಎಸ್‌ಆರ್‌ಪಿಸಿ/ಐಆರ್‌ಬಿ/ಕೆಎಸ್‌ಆರ್‌ಪಿ, ಪುರುಷ ಮತ್ತು ಮಹಿಳಾ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಸಿ.ಇ.ಟಿ. ಲಿಖಿತ ಪರೀಕ್ಷೆಯು ಬೆಳಗಾವಿ ನಗರದ ಒಟ್ಟು ೩೯ ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದೆ.

ಒಟ್ಟು ೧೧೯೨೧ ಅಭ್ಯರ್ಥಿಗಳ ಪೈಕಿ ೮೪೬೧ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಜಿಐಟಿ ಕಾಲೇಜ, ಉದ್ಯಮಬಾಗ, ಲವ್‌ಡೇಲ್ ಸೆಂಟ್ರಲ್ ಸ್ಕೂಲ, ಮಾಳಮಾರುತಿ, ಕೆಎಲ್‌ಎಸ್ ಸಂಸ್ಥೆ, ಇಂಗ್ಲೀಷ್ ಮಿಡಿಯಮ್ ಪ್ರೀ ಪ್ರೈಮರಿ, ಪ್ರೈಮರಿ ಮತ್ತು ಹೈಸ್ಕೂಲ ಕೆಎಲ್‌ಎಸ್ ಕ್ಯಾಂಪಸ್ ಟಿಳಕವಾಡಿ ಮತ್ತು ಸರ್ಕಾರಿ ಚಿಂತಾಮಣರಾವ್ ಪದವಿ ಪೂರ್ವ ಮಹಾವಿದ್ಯಾಲಯ, ಶಹಾಪೂರಗಳಲ್ಲಿ ಮೂಲ ಅಭ್ಯರ್ಥಿಗಳ ಬದಲಾಗಿ ಬೇರೊಬ್ಬ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಬಗ್ಗೆ ಹಾಗೂ ನಕಲಿ ಸಹಿ ಮಾಡಿದ ಬಗ್ಗೆ ಕಂಡುಬಂದಿದೆ.

ಈ ಕುರಿತು  ೧) ಉದ್ಯಮಬಾಗ ಠಾಣೆ ಪ್ರ. ಸಂ. ೪೯/೨೦೨೦, ಕಲಂ. ೪೧೯, ೪೨೦ ಐಪಿಸಿ,
೨) ಮಾಳಮಾರುತಿ ಠಾಣೆ ಪ್ರ ಸಂ. ೧೩೪/೨೦೨೦, ಕಲಂ. ೪೬೫, ೪೬೮, ೪೭೧, ೪೨೦ ಐಪಿಸಿ,
೩) ಟಿಳಕವಾಡಿ ಠಾಣೆ ಪ್ರ ಸಂ. ೮೭/೨೦೨೦ ಕಲಂ. ೪೧೯, ೪೨೦ ಐಪಿಸಿ
೪) ಶಹಾಪೂರ ಠಾಣೆ ಪ್ರ ಸಂ.೭೭/೨೦೨೦ ಕಲಂ. ೪೧೯, ೪೨೦, ೪೬೫, ೪೬೮, ೪೭೧ ಸಕ ೩೪ ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
೪ ಜನ ಆರೋಪಿತರನ್ನು ಬಂಧಿಸಲಾಗಿದ್ದು, ಸದರಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಮುಂದುವರೆಸಲಾಗಿದೆ.

ಆರೋಪಿಗಳ ವಿವರ –
1 . ಉದ್ಯಮಬಾಗ ಪೊಲೀಸ್ ಠಾಣೆಯ ಆರೋಪಿ-ಭೀಮಪ್ಪ ಮಾದೇವ ಹುಲ್ಲೋಳಿ, ಸಾ|| ಹಡಗಿನಾಳ ತಾ||ಗೋಕಾಕ

2. ಮಾಳಮಾರುತಿ ಪೊಲೀಸ್ ಠಾಣೆಯ ಆರೋಪಿ- ಮೆಹಬೂಬ ಅಕ್ಕಿವಾಟ  ಸಾ|| ಉದ್ದಗಟ್ಟಿ ತಾ||ಗೋಕಾಕ

3. ಶಹಾಪೂರ ಪೊಲೀಸ್ ಠಾಣೆಯ ಆರೋಪಿ-ಆನಂದ ಹನಮಂತ ಒಡೆಯರ ಸಾ| ಉದಗಟ್ಟಿ ತಾ||ಗೋಕಾಕ

4. ಟಿಳಕವಾಡಿ ಪೊಲೀಸ್ ಠಾಣೆಯ ಆರೋಪಿ ಃ ಸುರೇಶ ಕಡಬಿ ಸಾ|| ಬೆಣಚಿನಮರ್ಡಿ ತಾ|| ಗೋಕಾಕ