ಭೀಕರ ಅಪಘಾತಕ್ಕೆ ಬೆಳಗಾವಿಯ ಐವರು ಬಲಿ

ತಕ್ಷಣ ಸಹಾಯ ಹಸ್ತ ಚಾಚಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

Vishwanath Patil Add

ಪ್ರಗತಿವಾಹಿನಿ ಸುದ್ದಿ, ಸೊಲ್ಲಾಪುರ – ಬೆಳಗಾವಿಯಿಂದ ಫಂಡರಾಪುರಕ್ಕೆ ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಐವರು ಸಾವಿಗಿಡಾಗಿದ್ದಾರೆ. ಬೊಲೆರೋ ವಾಹನ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಬೆಳಗಿನಜಾವ 4.30ರ ಹೊತ್ತಿಗೆ ಸಾಂಗೋಲ್ಯಾ ಬಳಿ ಅಪಘಾತ ಸಂಭವಿಸಿದೆ.

ಮೃತರು ಮಂಡೋಳಿ ಮತ್ತು ಹಂಗರಗಾ ನಿವಾಸಿಗಳು. ಘಟನೆಯಲ್ಲಿ ಇನ್ನೂ 7 ಜನರು ಗಾಯಗೊಂಡಿದ್ದು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ತೀಕ ಏಕಾದಶಿ ಹಿನ್ನೆಲೆಯಲ್ಲಿ ಪಂಢರಾಪುರ ವಿಠಲನ ದರ್ಶನ ಪಡೆಯಲೆಂದು ಬೆಳಗಾವಿಯಿಂದ ಸುಮಾರು 13 ಜನರು ಬೊಲೆರೋ ವಾಹನದಲ್ಲಿ ತೆರಳುತ್ತಿದ್ದರು. ಬೆಳಗಿನಜಾವ ಇವರ ವಾಹನ ಟ್ರ್ಯಾಕ್ಟರ್ ಒಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಐವರು ಸ್ಥಳದಲ್ಲೇ ಸಾವಿಗೀಡಾದರು.

Jolle Add

ಮಂಡೋಳಿಯ ಬಾಳು ಅಂಬೇವಾಡಿಕರ್ (49), ಕೃಷ್ಣಾ ಕಣಬರಕರ್ (47), ಮಹಾದೇವ ಕಣಬರಕರ್ (48), ಅರುಣ ಮುತಗೇಕರ್ (38) ಹಾಗೂ ಹಂಗರಗಾದ ಅದಾ ಪಾಟೀಲ (45) ಮೃತರು.

ಲಕ್ಷ್ಮಿ ಹೆಬ್ಬಾಳಕರ್ ಸ್ಪಂದನೆ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸೊಲ್ಲಾಪುರ ಶಾಸಕಿ ಪ್ರಣೀತಿ ಸಿಂಧೆ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರನ್ನು ಸ್ಥಳಕ್ಕೆ ಕಳಿಸಿ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತೆ ಕೋರಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಪ್ರಣೀತಿ ಶಿಂಧೆ, ತಮ್ಮ ಕಾರ್ಯಕರ್ತರನ್ನು ಕಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಸುವುದು ಸೇರಿದಂತೆ ಎಲ್ಲ ರೀತಿಯ ನೆರವಿಗೆ ಮುಂದಾಗಿದ್ದಾರೆ.