ಬೆಳಗಾವಿಯಲ್ಲಿ ಭಾರಿ ಪ್ರಮಾಣದ ಸಾರಾಯಿ ಜಪ್ತಿ

ಸಿ.ಇ.ಎನ್ ಅಪರಾಧ ಪೊಲೀಸ ಠಾಣೆ ಅಧಿಕಾರಿಗಳ ದಾಳಿ; 4.42 ಲಕ್ಷ ರೂ. ಮೌಲ್ಯದ ಸಾರಾಯ್ ಜಪ್ತಿ

Vishwanath Patil Add

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಕ್ಯಾಂಪ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ವಿನಾಯಕ ನಗರದ ಅರ್ಪಣ ರೆಸಿಡೆನ್ಸಿ ಅಪಾರ್ಟಮೆಂಟ್ ನ  ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಭಾರಿ ಪ್ರಮಾಣದ ಸಾರಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬ್ಲಂಡರ್ ಪ್ರೈಡ್, ರಾಯಲ್ ಸ್ಟ್ಯಾಗ್, ರಾಯಲ್ ಚಾಲೇಂಜ್. ಮ್ಯಾಜಿಕ್ ಮೊಮೆಂಟ್ ವೋಡಕಾ, ಪೀಟರ್ ಸ್ಕಾಟ್, ಮ್ಯಾಕ್‌ಡಾವೆಲ್ಸ್ ಹೀಗೆ ವಿವಿಧ ಕಂಪನಿಗಳ ಗೋವಾ ರಾಜ್ಯದ ಹಾಗೂ ಮಿಲ್ಟ್ರಿಯ ಸರಾಯಿ ಬಾಟಲಿಗಳನ್ನು ತಂದು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಯಲಾಗಿದೆ.

ಎಸಿಪಿ  ಮಹಾಂತೇಶ್ವರ ಜಿದ್ದಿ   ಮೇಲ್ವಿಚಾರಣೆಯಲ್ಲಿ  ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಪಿಐ ಯು.ಹೆಚ್.ಸಾತೇನಹಳ್ಳಿ, ತಮ್ಮ ಅಧೀನ ತಂಡದ ಸಿಬ್ಬಂದಿ ಜೊತೆಗೆ ದಾಳಿ ನಡೆಸಿದರು.

Jolle Add

ಜಯಶ್ರೀ ಎಸ್ ಮಾನೆ ಪಿಎಸ್‌ಐ,   ಎಸ್.ಎಲ್.ದೇಶನೂರ ಎಎಸ್‌ಐ, ಹಾಗೂ ಸಿಬ್ಬಂದಿಗಳಾದ ಬಿ.ಎಫ್. ಬಸ್ತವಾಡ, ಎನ್, ಜೆ. ಮಾದಾರ, ಡಿ.ಹೆಚ್.ಮಾಳಗಿ ಎಸ್.ಎಲ್.ಅಜ್ಜಪ್ಪನವರ, ಮಾರುತಿ ಎಲ್. ಕೊನ್ಯಾಗೋಳ, ಕೆ.ವ್ಹಿ ಚರಲಿಂಗಮಠ ವಿ.ಎನ್.ಬಡವಣ್ಣವರ ಹಾಗೂ ಎ.ಎಮ್.ರಾಮಗೋನಟ್ಟಿ   ದಾಳಿಯಲ್ಲಿದ್ದರು.

ರಾಜೇಶ ಕೇಶವ ನಾಯ್ಕ (37) (ಸಾ: ಕುಮಾರಸ್ವಾಮಿ ಲೇ ಔಟ್, 2 ನೇ ಮೇನ್ ಪ್ಲಾಟ್ ನಂ: 239 ಬಾಕ್ಸೈಟ್ ರೋಡ್ ಬೆಳಗಾವಿ) ಇವನನ್ನು ವಶಕ್ಕೆ ಪಡೆದುಕೊಂಡು ಅವರು ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟ ವಿವಿಧ ಕಂಪನಿಯ 750 ಎಮ್.ಎಲ್.ದ ರೂ.4,42,000 ರೂ. ಮೌಲ್ಯದ 411 ಸಾರಾಯಿ ಬಾಟಲಿಗಳನ್ನು  ಜಪ್ತು ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಪಿಐ ಸಿಇಎನ್ ಅಪರಾಧ ಠಾಣೆ ಮತ್ತು ಅವರ ತಂಡ ಈ ಕಾರ್ಯವನ್ನು ಪೊಲೀಸ್ ಆಯುಕ್ತ  ಬಿ. ಎಸ್. ಲೋಕೇಶಕುಮಾರ  ಡಿಸಿಪಿ ಯಶೋಧಾ ವಂಟಗುಡೆ ಶ್ಲಾಘಿಸಿದ್ದಾರೆ.