KLE1099 Add

ಬೆಳಗಾವಿಯಲ್ಲಿ ಗೆಳೆಯರ ಬಡಿದಾಟ: ಓರ್ವನ ಕೊಲೆ

ಭಾನುವಾರ ರಾತ್ರಿ 10.30ರ ಹೊತ್ತಿಗೆ ಘಟನೆ

Beereshwara 6

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆಳೆಯರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಹೊಡೆದಾಟಕ್ಕೆ ತಿರುಗಿ ಓರ್ವನ ಕೊಲೆಯಾಗಿದೆ.

ಭಾನುವಾರ ರಾತ್ರಿ 10.30ರ ಹೊತ್ತಿಗೆ ಘಟನೆ ನಡೆದಿದೆ.

ಗೆಳಯರಿಬ್ಬರು ಸೇರಿ ಸಾರಾಯಿ ಕುಡಿದು ಬರುವಾಗ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಾಡ್ ನಿಂದ ಓರ್ವ ಇನ್ನೋರ್ವನ ತಲೆಗೆ ಹೊಡೆದಿದ್ದು, ಆತ ಅಲ್ಲಿಯೆ ಕುಸಿದು ಬಿದ್ದಿದ್ದಾನೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕುಳಿಯಲಿಲ್ಲ.

ಸಾವಿಗೀಡಾದವನ ಹೆಸರು ಸೂರಜ್ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.

ದೆಹಲಿ ತಲುಪಿದ ರಮೇಶ ಜಾರಕಿಹೊಳಿ; ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ?

You cannot copy content of this page