ಲಾಡ್ಜ್ ನಲ್ಲಿ ಯೋಧ ಆತ್ಮಹತ್ಯೆ

Soldier suicide at the lodge

ಲಾಡ್ಜ್ ನಲ್ಲಿ ಯೋಧ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ;

ಪಟ್ಟಣದ ಸರ್ಕಲ್ ಹತ್ತಿರದ ರಾಮಕೃಷ್ಣ ವಸತಿ ಗೃಹ (ಲಾಡ್ಜ)ದಲ್ಲಿ ಯೋಧನೊರ್ವ ನೇಣು ಹಾಕಿಕೊಂಡು ಮೃತ ಪಟ್ಟಿದ್ದಾನೆ.

ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪ್ರಮೋದ ಭುಜಬಲಿ ಕಡಹಟ್ಟಿ(೩೨) ನೇಣು ಹಾಕಿಕೊಂಡಿದ್ದಾನೆ.

ಪ್ರಮೋದ ರವಿವಾರ ಪಟ್ಟಣದ ರಾಮಕೃಷ್ಣ ವಸತಿಗೃಹದಲ್ಲಿ ಕೊಠಡಿಯನ್ನು ಪಡೆದುಕೊಂಡಿದ್ದನು. ಸೋಮವಾರ ಕೊಠಡಿಯ ಬಾಗಿಲು ತೆರೆಯದ ಕಾರಣ ವಸತಿಗೃಹದ ಸಿಬ್ಬಂದಿಗಳು ಸಂಶಯಗೊಂಡು ಪರಿಶೀಲಿಸಿದಾಗ ಯೋಧ ಬೆಲ್ಟ್ ಹಾಗೂ ಸ್ಕಾರ್ಪನಿಂದ ನೇಣು ಹಾಕಿಕೊಂಡಿದ್ದಾನೆಂದು ಗೋಚರಿಸಿದೆ. ಪತ್ನಿ ಮಕ್ಕಳೊಂದಿಗೆ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಯೋಧ ಇತ್ತೀಚೆಗೆ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದನು.  ವೈಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ಮೃತನ ತಂದೆ ಭುಜಬಲಿ ಕಡಹಟ್ಟಿ ದೂರಿನ ಮೇರೆಗೆ  ಪಿಎಸ್‌ಐ ಶಿವಾನಂದ ಗುಡನಟ್ಟಿ  ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.