Kannada NewsKarnataka NewsNationalPolitics

*ಗೋವುಗಳ ಕೆಚ್ಚಲ ಕುಯ್ದಿರುವುದು ಪೈಶಾಚಿಕ ಕೃತ್ಯ: ಪೇಜಾವರ ಶ್ರೀ*

ಪ್ರಗತಿವಾಹಿನಿ ಸುದ್ದಿ: ಸದ್ಯ ರಾಜ್ಯದಲ್ಲಿ ಗೋವುಗಳ ಕೆಚ್ಚಲನ್ನೇ ಕುಯ್ದಿರುವುದು ಪ್ರಕರಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕರ್ನಾಟಕದಲ್ಲಿ ನಡೆದಿರುವುದು ಪೈಶಾಚಿಕ ಕೃತ್ಯ ಎಂದು ಪೇಜಾವರ ಶ್ರೀಗಳು ಖಂಡಿಸಿದ್ದಾರೆ. 

ಕರ್ನಾಟಕದ ಚಾಮರಾಜನಗರದಲ್ಲಿ ನಡೆದಿರುವುದು ಅತ್ಯಂತ ವೈಶಾಚಿಕ ಮತ್ತು ಹೇಯ ಕೃತ್ಯ. ಇಂತಹ ಘಟನೆಗಳು ಮುಂದೊಂದೂ ನಡೆಯಬಾರದು.ಈ ಘಟನೆಯನ್ನು ಖಂಡಿಸುವುದರೊಂದಿಗೆ ಅಪರಾಧಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗಬೇಕು ಗೋವನ್ನು ನಾವು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅದರ ಪ್ರಯೋಜನ ಪಡೆಯುತ್ತೇವೆ. ಇಂತಹ ಗೋವುಗಳನ್ನು ಪ್ರತಿಭಟನೆಗೆ ಬಳಸಿದರು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಅದರ ಕೆಚ್ಚಲನ್ನೇ ಕುಯ್ದಿರುವುದು ಅತ್ಯಂತ ನೀಚ ಕೃತ್ಯ. ಇದನ್ನು ಖಂಡಿಸುತ್ತೇವೆ. ಸರಕಾರ ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು. ಇಲ್ಲದಿದ್ದಲ್ಲಿ ನಾವೇ ಹೋರಾಟ ಮಾಡಬೇಕಾದೀರು ಎಂದು ಪೇಜಾವರ ಶ್ರೀಗಳು ಒತ್ತಾಯ ಮಾಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button