ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೆಚ್ಚುತ್ತಿರುವ ಸೈಬರ್ ಹಣಕಾಸು ವಂಚನೆ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸುಮಾರು 30ಕ್ಕೂ ಹೆಚ್ಚು ಪ್ರಮುಖ ಬ್ಯಾಂಕ್ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬ್ಯಾಂಕ್, ಎಟಿಎಂ ಮೊದಲಾದೆಡೆ ನಡೆಯುವ ಕ್ರೈಂ ಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ತನಿಖೆ ಮತ್ತು ರಿಕವರಿ ವೇಳೆಯಲ್ಲಿ ಪೊಲೀಸರೊಂದಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ಸೂಚಿಸಲಾಯಿತು.
ಜೊತೆಗೆ ಗ್ರಾಹಕರಲ್ಲಿ ಸರಿಯಾದ ಜಾಗ್ರತಿ ಮೂಡಿಸಬೇಕು. ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಸೆಕ್ಯುರಿಟಿ ಆಡಿಟ್, ಫೈರ್ ಆಡಿಟ್ ಗಳನ್ನು ನಡೆಸಬೇಕು. ಜೊತೆಗೆ ನಡೆಯಬಹುದಾದ ಕ್ರೈಂ ಗಳ ಕುರಿತು ಕಾಲಕಾಲಕ್ಕೆ ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದೂ ಕೋರಲಾಯಿತು ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದೆ. ಒಟಿಪಿ ಪಡೆದು ವಂಚಿಸುವವರ ಸಂಖ್ಯೆ ವಿಪರೀತವಾಗಿದೆ.
ಹಾಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಬ್ಯಾಂಕ್ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ ಪೊಲೀಸರ ಈ ಸಭೆ ಗಮನಾರ್ಹವಾಗಿದೆ.
(ಅನುಮತಿ ಇಲ್ಲದೆ ಪ್ರಗತಿವಾಹಿನಿಯ ಸುದ್ದಿಗಳನ್ನು ನಕಲು ಮಾಡುವುದು ಅಪರಾಧವಾಗಿದೆ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ