*15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ವ್ಯಕ್ತಿಯಿಂದ ಬರೋಬ್ಬರಿ 1.62 ಕೋಟಿ ರೂಪಾಯಿ ದೋಚಿದ ಸೈಬರ್ ವಂಚಕರು*

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಬಗ್ಗೆ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಬೆಂಗಳೂರಿನ ನಿವೃತ್ತ ಅಧಿಕಾರಿಯೊಬ್ಬರನ್ನು ಸೈಬರ್ ವಂಚಕರು 15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚಿಸಿ, ಬರೋಬ್ಬರಿ 1.62 ಕೋಟಿ ರೂಪಾಯಿ ದೋಚಿದ್ದಾರೆ.
ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳ ಹೆಸರಲ್ಲಿ ಕರೆ ಸೆ.27ರಂದು ಕರೆ ಮಾಡಿದ ವಂಚಕರು ಮಾನವ ಕಳ್ಳಸಾಗಣೆ ಆರೋಪದ ಬೆದರಿಕೆ ಹಾಕಿ 15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.
ಮುಂಬೈನ ಐಷಾರಾಮಿ ಹೋಟೆಲ್ ಮೇಲೆ ದಾಳಿ ನಡೆಸಿದಾಗ ನಿಮ್ಮ ಹೆಸರಿನ ದಾಖಲೆಗಳು ಸಿಕ್ಕಿವೆ. ನಿಮ್ಮ ವಿರುದ್ಧ ಮಾನವ ಕಳ್ಳ ಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಪ್ರಕರಣದಿಂದ ಪಾರುಮಾಡಲು ನಿಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ಕೊಡಿ ಎಂದಿದ್ದಾರೆ.
ಅಧಿಕಾರಿ ಪ್ರಶ್ನಿಸಿದಾಗ ಯಾವುದೇ ಮೋಸ ಆಗಲ್ಲ ಎಲ್ಲಾ ಹಣವು ವಾಪಸ್ ಸಿಗುತ್ತದೆ ಎಂದು ಒಟಿಪಿ ಕೂಡ ಕಳುಹಿಸಿದ್ದಾರೆ. ಹೀಗೆ ಸೆ. 27ರಿಂದ ಅಕ್ಟೋಬರ್ 10ರ ನಡುವೆ ಹಂತ ಹಂತವಾಗಿ 1.62,77,160 ರೂಪಾಯಿ ಖಾತೆಯಿಂದ ವರ್ಗಾವಣೆಗೊಂಡು ದೋಚಿದ್ದಾರೆ.
ಸದ್ಯ ವಂಚನೆಗೊಳಗಾದ ವ್ಯಪ್ತಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.