Kannada NewsKarnataka NewsLatest

*BREAKING: ಸಿಲಿಂಡರ್ ಲೀಕ್ ಆಗಿ ಹೊತ್ತಿಕೊಂಡ ಬೆಂಕಿ: ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ಅಡುಗೆ ಅನೀಲ ಸೋರಿಕೆಯಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿದ್ದರಾಜು, ಪತ್ನಿ ಚಂದ್ರಮ್ಮ ಹಾಗೂ ಮಗ ಪ್ರಶಾಂತ್ ಮೃತ ದುರ್ದೈವಿಗಳು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಅಮರನಾರಾಯಣ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ತಿಂಡಿ ಮಾಡಲು ಗ್ಯಾಸ್ ಹಚ್ಚುತ್ತಿದ್ದಂತೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.

ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೂವರೂ ಸಾವನ್ನಪ್ಪಿದ್ದಾರೆ.

Home add -Advt

Related Articles

Back to top button