Latest

*ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ*

ಪ್ರಗತಿವಾಹಿನಿ ಸುದ್ದಿ : ಪ್ರತಿ ತಿಂಗಳಿನಂತೆ ಇಂದೂ ಪೆಟ್ರೋಲಿಯಂ ಕಂಪನಿಗಳಿಂದ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆಗೊಂಡಿದ್ದು, ವಾಣಿಜ್ಯ ಸಿಲಿಂಡರ್ ಗಳ ದರವನ್ನು 24 ರೂ. ಕಡಿತಗೊಳಿಸಲಾಗಿದೆ. 

ದೇಶಾದ್ಯಂತ ಈ ದರ ಇಂದಿನಿಂದಲೇ ಜಾರಿಗೆ ಬರಲಿದ್ದು, 19 ಕೆ.ಜಿ ವಾಣಿಜ್ಯ ಸಿಲಿಂಡ‌ರ್ ದರ ನವದೆಹಲಿಯಲ್ಲಿ 1723 ರೂ. ಆಗಿದೆ. ಗೃಹಬಳಕೆ ಸಿಲಿಂಡ‌ರ್ ದರ ಯಾವುದೇ ಪರಿಷ್ಕರಣೆಯಾಗಿಲ್ಲ. 

ಹೀಗಾಗಿ ಗೃಹಬಳಕೆ ಸಿಲಿಂಡರ್‌ ದರ ಯಥಾವತ್ತಾಗಿ ಮುಂದುವರೆಯಲಿದೆ. ಕೆಲವೇ ದಿನಗಳ ಹಿಂದಷ್ಟೇ ಹೋಟೆಲ್ ಗಳು ಸಿಲಿಂಡರ್‌ ಮತ್ತು ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಕಾಫಿ, ಟೀ ದರವನ್ನು ಹೆಚ್ಚಿಸಿತ್ತು.

ಸಿಲಿಂಡರ್ ಗಳ ದರವನ್ನು 24 ರೂ. ಕಡಿತಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button