Kannada NewsLatestNational

*524 ಸಿಂಡರ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ನ್ನೇ ಕದ್ದು ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಇರಾನ್-ಇಸ್ರೇಲ್-ಅಮೆರಿಕಾ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಈ ನಡುವೆ ಎಲ್ ಪಿಜಿ ಸಿಲಿಂಡರ್ ಕೊರತೆ ಉಂಟಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಘ್, 500ಕ್ಕೂ ಹೆಚ್ಚು ಸಿಲಿಂಡರ್ ಗಳಿದ್ದ ಟ್ರಕ್ ನ್ನೇ ಕಳ್ಳತನಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಾಯಗಂಜ್ ಮೂಲದ ನೀರಜ್ ಅಗರ್ವಾಲ್ ಅವರಿಗೆ ಸೇರಿದ ಟ್ರಕ್ ನಲ್ಲಿ ಭಾರತ್ ಪೆಟ್ರ‍ೋಲಿಯಂ ಗೆ ಸೇರಿದ 524 ಎಲ್ ಪಿಜಿ ಸಿಲಿಂಡರ್ ಸಾಗಿಸಲಾಗುತ್ತಿತ್ತು.

ಟ್ರಕ್ ಚಾಲಕ ರಾಜ್ ಕುಮಾರ್ ಎಂಬಾತ ಗಾಡಿಯನ್ನು ಕಾರಾರಿ ಡಿಪೋ ಬಳಿ ನಿಲ್ಲಿಸಿ, ಹೋಳಿಹಬ್ಬಕ್ಕಾಗಿ ಮಾರ್ಚ್ 2ರಂದು ಊರುಗೆ ಹೋಗಿದ್ದರು. ಮಾರ್ಚ್ 6ರಂದು ಮರಳಿ ಬಂದಾಗ ಸಿಲಿಂಡರ್ ಗಳ ಸಮೇತ ಟ್ರಕ್ ಕಳ್ಳತನಾವಾಗಿತ್ತು.

ನೀರಜ್ ಅಗರ್ವಾಲ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು. ಮಾರ್ಚ್ 7ರಂದು ಬರಗಾಂವ್ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಟ್ರಕ್ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ಸಿಲಿಂಡರ್ ಗಳು ಮಾತ್ರ ಕಳ್ಳತನಾವಾಗಿವೆ. ತನಿಖೆ ನಡೆಸಿರುವ ಪೊಲೀಸರು ಶೀಘ್ರದಲ್ಲಿ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Home add -Advt

Related Articles

Back to top button