
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಾದ್ಯಂತ 1ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ತೆರೆಯದಂತೆ ಹೊರಡಿಸಲಾಗಿದ್ದ ಆದೇಶವನ್ನು ಬದಲಾವಣೆ ಮಾಡಿ ಬುಧವಾರ ಜಿಲ್ಲಾಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿಗಳ ಜೊತೆಗಿನ ವೀಡಿಯೋ ಸಂವಾದದ ನಂತರ ಈ ಬದಲಾವಣೆ ಮಾಡಲಾಗಿದೆ. ಜನೆವರಿ 11ರಿಂದ 18ರ ವರೆಗೆ ಶಾಲೆಗಳನ್ನು ತೆರೆಯದಂತೆ ಆದಶ ಹೊರಡಿಸಲಾಗಿತ್ತು.
ಈಗ ಇದನ್ನು ಬದಲಾವಣೆ ಮಾಡಿ ಜನೆವರಿ 17ರಿಂದ ಶಾಲೆಗಳನ್ನು ಆರಂಭಿಸುವಂತೆ ಸೂಚಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಸೈನಿಕ ವಸತಿ ಶಾಲೆ ಹೊರತುಪಡಿಸಿ ಬೇರೆಲ್ಲ ಶಾಲೆ, ಕಾಲೇಜುಗಳನ್ನು ಜನೆವರಿ 17ರಿಂದಲೇ ಆರಂಭಿಸಲು ಸೂಚಿಸಲಾಗಿದೆ.
ಸೈನಿಕ ಶಾಲೆಯನ್ನು ಮುಂದಿನ ಆದೇಶದವರೆಗೆ ತೆರೆಯದಂತೆ ಸೂಚಿಸಲಾಗಿದೆ.
ಹೊಸ ಆದೇಶದ ಪ್ರತಿ ಇಲ್ಲಿದೆ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ