ಸ್ಯಾಂಡಲ್ ವುಡ್ ನಲ್ಲಿ ಬರ್ತಿದೆ ’ಮಠ’ ಹೆಸರಲ್ಲಿ ಮತ್ತೊಂದು ಸಿನಿಮಾ  

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  2006ರಲ್ಲಿ  ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಚಿತ್ರ ’ಮಠ’.

ಹೌದು,  ಗುರು ಪ್ರಸಾದ್  ಅವರ ಮೊದಲ ನಿರ್ದೇಶನದಲ್ಲಿ ನವರಸನಾಯಕ ಜಗ್ಗೇಶ್ ಅಭಿನಯದಲ್ಲಿ ಮೂಡಿ ಬಂದಿದ್ದ  ‘ಮಠ‘ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡಿತ್ತು.

ಈ ಸಿನಿಮಾದ ವ್ಯಂಗ್ಯಭರಿತ ಡೈಲಾಗ್ ಗಳು,  ಹಾಡುಗಳೂ ಕೂಡ ಜನಮನ ಗೆದ್ದಿದ್ದವು.  ಇದೀಗ ಸ್ಯಾಂಡಲ್ವುಡ್ ನಲ್ಲಿ ಮತ್ತೆ ಅದೇ ಹೆಸರನ್ನಿಟ್ಟುಕೊಂಡಿರುವ ’ಮಠ’ ಎಂಬ  ಹೊಸ ಸಿನಿಮಾವೊಂದು ತೆರೆಗೆ ಬರುತ್ತಿದೆ. ಆದರೆ ಈ ಚಿತ್ರದ ನಿರ್ದೇಶಕ ಗುರುಪ್ರಸಾದ್ ಅಲ್ಲ, ಜಗ್ಗೇಶ್ ಕೂಡ ಈ ಚಿತ್ರದಲ್ಲಿಲ್ಲ. 2006 ’ಮಠ’ ಚಿತ್ರದ ಸೀಕ್ವೆಲ್ ಕೂಡ ಅಲ್ಲ.

ರವೀಂದ್ರ ವೆಂಕಿ ನಿರ್ದೇಶನದಲ್ಲಿ ’ಮಠ’ ಶಿರ್ಷೇಯಲ್ಲಿ ಈ ಹೊಸ ಚಿತ್ರ ಮೂಡಿಬರುತ್ತಿದೆ. ಸಂತೋಷ್ ದಾವಣಗೆರೆ ನಾಯಕನಾಗಿರುವ ಈ ಚಿತ್ರದಲ್ಲಿ  ಸಾಧು ಕೋಕಿಲಾ, ರಾಜು ತಾಳಿಕೋಟೆ, ಬ್ಯಾಂಕ್ ಜನಾರ್ಧನ್ ಹಾಗೂ ಶರತ್ ಲೋಹಿತಾಶ್ವ  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

Home add -Advt

ಹೊಸ ವರ್ಷಕ್ಕೆ ಚಿತ್ರದ ಪೋಸ್ಟರ್ ಕೂಡ ಚಿತ್ರ ತಂಡ ಬಿಡುಗಡೆ ಮಾಡಿದೆ. ವಿ.ಆರ್ ಕಂಬೈನ್ಸ್ ಬ್ಯಾನರ್ ನಲ್ಲಿ ನೂತನ ’ಮಠ’ ಚಿತ್ರ ನಿರ್ಮಾಣವಾಗುತ್ತಿದೆ.

Related Articles

Back to top button