ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಅಧಿಕಾರ ಇರುವುದು ಜನರಿಗೆ ಸಹಾಯ ಮಾಡಲು ಹೊರತು ದುರುಪಯೋಗ ಪಡಿಸಿಕೊಳ್ಳಲು ಅಲ್ಲ. ನಾವು ಜನರಿಂದ ಆಯ್ಕೆಯಾಗಿರುವುದು ಅವರಿಗೆ ಸಹಾಯ ಮಾಡಲು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಮಾತನಾಡಿದ ಡಿ.ಕೆಶಿವಕುಮಾರ್, ಈ ಹಿಂದೆ ಭೇಟಿ ನೀಡಿದಾಗ ನಮ್ಮ ಶಾಸಕರು ಸಂಗಮದಲ್ಲಿ ಒಂದು ಕೆಲಸವಾಗಬೇಕು ಎಂದಿದ್ದರು. ಅದಕ್ಕೆ ಚಾಲನೆ ಕೂಡ ಸಿಕ್ಕಿತ್ತು. ಆದರೆ, ಕೆಲವರು ತಮ್ಮ ಬಳಿ ಅಧಿಕಾರ ಬಳಸಿಕೊಂಡು, ನಾನು ಕೊಟ್ಟ ಅನುದಾನ ರದ್ದಾಗಿದೆ. ಇದನ್ನು ಆ ದತ್ತಾತ್ರೇಯ ನೋಡಿಕೊಳ್ಳುತ್ತಾನೆ. ಇದು ಸರಿಯಲ್ಲ. ಅಧಿಕಾರವಿರುತ್ತದೆ. ಹೋಗುತ್ತದೆ. ಆದರೆ, ನಾವು ಜನರಿಂದ ಆಯ್ಕೆಯಾಗಿರುವಾಗ ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.
ನಾಡಿನ ಜನತೆಗೆ ಒಳ್ಳೆಯದಾಗಲಿ ಅಂತ ದತ್ತ ಮಂದಿರಕ್ಕೆ ಭೇಟಿ ನೀಡಿದ್ದೇನೆ. ದತ್ತನ ಪಾದ ಪವಿತ್ರವಾದಂತಹ ಪಾದ, ಪವಿತ್ರ ಕ್ಷೇತ್ರ ಇದು. ಕ್ಷೇತ್ರಕ್ಕೆ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಿಂದ ಅನೇಕರು ಇಷ್ಟಾರ್ಥ ಸಿದ್ದಿಗಾಗಿ ಭೇಟಿ ನೀಡುತ್ತಾರೆ. ನಾನಿಲ್ಲಿ ಹಿಂದೆ ಕೂಡ ಬಂದಿದ್ದೆ. ಮತ್ತೆ ಈಗ ಬಂದಿದ್ದೇನೆ. ಬ್ರಹ್ಮ, ವಿಷ್ಣು, ಮಹೇಶ್ವರ, ದರ್ಶನ ಮಾಡಿ ದತ್ತನ ನಿರ್ಗುಣ ಪಾದುಕೆ ದರ್ಶನ ನನಗೆ ದೊರೆತಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ