*ಸಾಹುಕಾರ್ ನನ್ನಾದ್ರೂ ಇಟ್ಟುಕೊಳ್ಳಲಿ; ಸಾವರ್ಕರ್ ನ್ನಾದ್ರೂ ಇಟ್ಕೊಳ್ಳಲಿ; ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಗೆ ಡಿ.ಕೆ.ಶಿವಕುಮಾರ್ ಖಡಕ್ ತಿರುಗೇಟು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ಬಾರಿಯ ಚುನಾವಣೆ ಟಿಪ್ಪು V/S ಸಾವರ್ಕರ್ ನಡುವಿನ ಚುನಾವಣೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಟೀಲ್ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಟಿಪ್ಪು ವಿಚಾರವನ್ನು ನಾವು ತೆಗೆದುಕೊಂಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ನಾನು ಮೊದಲೇ ಹೇಳಿದ್ದೇನೆ ಬದುಕು ಮತ್ತು ಭಾವನೆ…ನಾವು ಕಾಂಗ್ರೆಸ್ ನವರು ಜನರ ಬದುಕಿನ ಬಗ್ಗೆ ಹೇಳುತ್ತಿದ್ದೇವೆ, ಬೆಲೆ ಏರಿಕೆ ಬಗ್ಗೆ ಹೇಳುತ್ತಿದ್ದೇವೆ, ಉದ್ಯೋಗದ ಬಗ್ಗೆ ಮಾತನಾಡುತ್ತಿದ್ದೇವೆ, ಶಾಂತಿ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಹಾಗಲ್ಲ ಎಂದರು.
ಕಟೀಲ್ ಅವರಿಗೆ ಅಭಿನಂದಿಸುತ್ತೇನೆ. ಅವರ ಸರ್ಕಾರದ ಸಾಧನೆ ಬಗ್ಗೆ ಹೇಳಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ’ಸಾಹುಕಾರ್’ ನನ್ನಾದರೂ ಇಟ್ಕೊಳ್ಳಲಿ, ’ಸಾವರ್ಕರ್’ ನ್ನಾದ್ರೂ ಇಟ್ಕೊಳ್ಳಲಿ, ಯಾವ ಫೋಟೋ ಇಟ್ಕೊಂಡು ಬೇಕಾದ್ರೂ ಅವರು ಎಲೆಕ್ಷನ್ ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಕುಟುಕಿದರು.
ನಾವು ಮುಂದಕ್ಕೆ ಈ ರಾಜ್ಯಕ್ಕೆ ವಿಧಾನಸೌಧದ ಈ ಕಟ್ಟಡದಲ್ಲಿ ಭ್ರಷ್ಟಾಚಾರವಿಲ್ಲದ ಸರ್ಕಾರವನ್ನು ಕೊಡುತ್ತೇವೆ. ನಿಮ್ಮ ಬದುಕಿಗೆ ಒಂದು ಮಾರ್ಗದರ್ಶನವನ್ನು ಕೊಡುತ್ತೇವೆ. ಪ್ರತಿಯೊಂದು ಮನೆಯನ್ನು ಕೂಡ ಬೆಳಗುತ್ತೇವೆ. ಪ್ರತಿಯೊಂದು ಹೆಣ್ಣು ಮಗಳಿಗೂ ಕೂಡ ಆರ್ಥಿಕವಾದ ಶಕ್ತಿ ಕೊಡುತ್ತೇವೆ ಈ ವಿಚಾರಗಳ ಮೇಲೆ ನಾವು ರಾಜ್ಯವನ್ನು ನಡೆಸುತ್ತೇವೆ. ಆ ಆತ್ಮವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಅದು ಅವರ ಪಕ್ಷದ ವಿಚಾರ. ಅವರ ಪಕ್ಷದ ಬಗ್ಗೆ ನಾನ್ಯಾಕೆ ಮಾತನಾಡಲು ಹೋಗಲಿ. ಕುಮಾರಸ್ವಾಮಿ ಪ್ರತಿ ಸಂದರ್ಭದಲ್ಲಿಯೂ ಅವರನ್ನ ಸಿಎಂ ಮಾಡ್ತಾರೆ, ಇವರನ್ನು ಸಿಎಂ ಮಾಡ್ತಾರೆ ಎಂದು ಹೇಳುತ್ತಾರೆ ಅದು ಅವರ ಪಾರ್ಟಿ ಅಜೆಂಡಾ. ಅವರ ಪಕ್ಷದ ಹೇಳಿಕೆಗೆ ನಾವು ಜವಾಬ್ದಾರರಲ್ಲ, ಅಪರರ ಪಕ್ಷದ ಅಜೆಂಡಾ ಅವರಿಗೆ ಬಿಟ್ಟದ್ದು ಎಂದು ಹೇಳಿದರು.
*ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್*
https://pragati.taskdun.com/d-k-shivakumarcbi-casehigh-courtrelief/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ