ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಹೆಣದ ಮೇಲೆ ಹಣ ಮಾಡೋಕೆ ಹೊರಟಿದೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ 8+1=9 ಜನ ಮಂತ್ರಿಗಳು ಅಷ್ಟ ದಿಕ್ಪಾಲಕರು ಆದರೆ ಒಬ್ಬರಾದರು ಒಂದು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರಾ? ಬಿಜೆಪಿ ಸರ್ಕಾರ ಎಲ್ಲರಿಗೂ ಕೋವಿಡ್ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕನ್ನು ಹಂಚಿಕೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
110 ದಿನಗಳ ನಂತರ ಆಸ್ಪತ್ರೆಯವರನ್ನ ಕರೆದು ಮಾತನಾಡಿದ್ದಾರೆ. ಈಗ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇವರದೇನಿದ್ದರೂ ಬೆಳಿಗ್ಗೆಯಿಂದ ಸಂಜೆವರೆಗೆ ದುಡ್ಡು ಹೊಡಿಯೋದು. ಆಶಾ ಕಾರ್ಯಕರ್ತರು 14 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಕರೆದು ಮಾತನಾಡಿದ್ದಾರಾ? ಆಟೋದವರಿಗೆ ನೇಕಾರರಿಗೆ ಚಾಲಕರಿಗೆ ಕೊಡ್ತಿನಿ ಆಂದ ದುಡ್ಡು ಕೊಟ್ಟಿದ್ದಾರಾ? ಯಾವಾಗ ಅವರಿಗೆ ಹಣ ಕೊಡುವುದು ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ