Belagavi NewsBelgaum News

*ಅದಿವೇಶನ ಸಂದರ್ಭದಲ್ಲಿ ಹೋರಾಟಕ್ಕೆ ಸಜ್ಜಾದ ನಿವೃತ್ತ ನೌಕರರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದ 25 ತಿಂಗಳ ಕಾಲಾವಧಿಯಲ್ಲಿ ನಿವೃತ್ತ ಹೊಂದಿರುವ ನೌಕರರಿಗೆ ಆರ್ಥಿಕ ನಷ್ಟವಾಗಿದೆ.‌ ಹಾಗಾಗಿ ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಎಂ ಪಿ ಎಂ ಷಣ್ಮುಖಯ್ಯ ಅವರು ತಿಳಿಸಿದರು.‌

ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ 7ನೇ ವೇತನ ಆಯೋಗ ಬಿಡುಗಡೆ ಮಾಡಿದೆ. ಆ ಸಂದರ್ಭದಲ್ಲಿ 25 ತಿಂಗಳ ಕಾಲಾವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಆರ್ಥಿಕ ನಷ್ಟವಾಗಿದೆ.  ಹಲವಾರು ಸಲ ಎಲ್ಲರ ಗಮನ ಸೆಳೆದರೂ ಕೂಡ ನಮ್ಮ ಮನವಿಗೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ.  ಹಾಗಾಗಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತೇವೆ. ಬೇಡಿಕೆ ಈಡೆರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಟ ಮಾಡುತ್ತೇವೆ.  ಈ ವಿಚಾರವಾಗಿ ಜಾಗೃತಿ ಮೂಡಿಸಲು ನಾಳೆ ಬೆಳಗಾವಿಯಿಂದ ರಥ ಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

Home add -Advt

Related Articles

Back to top button