Karnataka NewsLatestPolitics

*ವಿಪಕ್ಷಗಳ ಮತ್ಸರಕ್ಕೆ ಕಾರಣ ಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಶಕ್ತಿಯಿಲ್ಲದ ಕಾರಣ, ಅಧಿವೇಶನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಅವರು ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Home add -Advt

ಸಚಿವ ನಾಗೇಂದ್ರ ಅವರ ರಾಜಿನಾಮೆ ಒತ್ತಾಯಿಸಿ ಪ್ರತಿಪಕ್ಷಗಳು ನಾಳೆ ವಿಧಾನಸೌಧದಲ್ಲಿ ಧರಣಿ ನಡೆಸಲು ಸಿದ್ಧತೆ ನಡೆಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ಇಲ್ಲಿ ನೆಲದ ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಲು ಅವಕಾಶವಿದೆ. ಇಂದು ಅವರು ಗೂಂಡಾಗಿರಿ ಮಾಡುತ್ತಿದ್ದಾರೆ. ಒಂದು ನೋಟೀಸ್ ಕೂಡ ಕೊಡದೇ ಅಧಿವೇಶನದ ಕಾರ್ಯಕಲಾಪಗಳನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಧರಣಿ ಮಾಡುವುದು ತಪ್ಪಲ್ಲ. ಆದರೆ ನೋಟೀಸು ನೀಡಿ ಚರ್ಚೆ ನಡೆಸಲಿ. ಸಚಿವರ ರಾಜಿನಾಮೆ ಏಕೆ ನೀಡಬೇಕು ಎಂಬುದನ್ನು ಚರ್ಚೆ ಮಾಡಲು ಪ್ರತಿಪಕ್ಷಗಳಿಗೆ ತಾಳ್ಮೆ ಇಲ್ಲ” ಎಂದರು.

ದೇಶದ ಎಷ್ಟು ಸಚಿವರ ಮೇಲೆ ಮೊಕದ್ದಮೆಗಳಿವೆ ಎಂದು ತಿಳಿಸಲಿ

ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಶಕ್ತಿಯಿಲ್ಲ. ಇದುವರೆಗೆ ಯಾವ ಸಚಿವರ ಮೇಲೆ ಹಾಗೂ ಕೇಂದ್ರದ ಎಷ್ಟು ಸಚಿವರ ಮೇಲೆ ಮೊಕದ್ದಮೆಗಳಿವೆ ಎಂದು ಅವರೇ ತಿಳಿಸಲಿ”.” ಮಾಧ್ಯಮದವರು ದೇಶದ ಯಾವ ಸಚಿವರ ಹಾಗೂ ಯಾವ ಮುಖ್ಯಮಂತ್ರಿಗಳ ಮೇಲೆ ಎಷ್ಟು ಮೊಕದ್ದಮೆಗಳಿವೆ ಎಂಬ ದಾಖಲಾತಿಗಳೊಂದಿಗೆ ಪ್ರಶ್ನಿಸಬೇಕು. ಪ್ರತಿಪಕ್ಷಗಳು ಅಂತಹ ಎಷ್ಟು ಸಚಿವರ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆಯನ್ನು ಕೇಳುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳೂ ಪರಿಶೀಲಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 15 ಪರಿಶಿಷ್ಟ ವರ್ಗದ ಶಾಸಕರು ಆಯ್ಕೆಯಾಗಿದ್ದು , ಈ ಬಗ್ಗೆ ಅವರಿಗೆ ಮತ್ಸರವಿದೆ. ಅವರ ಪಕ್ಷದಲ್ಲಿ ಯಾವುದೇ ಪರಿಶಿಷ್ಟ ವರ್ಗದ ನಾಯಕರು ಹೊರಹೊಮ್ಮಲಿಲ್ಲ ಎಂಬ ಅಸಮಾಧಾನವಿರುವ ಕಾರಣ, ಈ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.

ಉದ್ಯಮಿ ಅದಾನಿ: ಸೌಜನ್ಯದ ಭೇಟಿ

ಇಂದು ಉದ್ಯಮಿ ಗೌತಮ್ ಅದಾನಿಯವರು ಮುಖ್ಯಮಂತ್ರಿಗಳನ್ನು ಭೇಟಿಯಾದ ಬಗ್ಗೆ ಮಾಧ್ಯದವರಿಗೆ ಪ್ರತಿಕ್ರಿಯೆ ನೀಡಿ, ನಾನು ಮುಖ್ಯಮಂತ್ರಿಯಾದ ನಂತರ ಉದ್ಯಮಿ ಗೌತಮ್ ಅದಾನಿಯವರು ಸೌಜನ್ಯದ ಭೇಟಿ ನೀಡಿ ಮಾತುಕತೆ ನಡೆಸಿದರು ಎಂದರು.

Related Articles

Back to top button