Latest

ಕುಸಿದುಬಿದ್ದ ದೂಧ ಸಾಗರ ಕೇಬಲ್ ಸೇತುವೆ; 40 ಜನರ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಗೋವಾದ ದೂಧಸಾಗರ್ ಜಲಪಾತದಲ್ಲಿ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದುಬಿದ್ದಿದ್ದು 40 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಶುಕ್ರವಾರ ಸಂಜೆ ಭಾರೀ ಮಳೆಯ ನಡುವೆ ಜಲಪಾತದಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಈ ವೇಳೆ ಕೇಬಲ್ ಸೇತುವೆ ಏಕಾಏಕಿ ಕುಸಿತಕ್ಕೊಳಗಾಯಿತು.

ಈ ವೇಳೆ ಸೇತುವೆಯಲ್ಲಿ ಪ್ರವಾಸಿಗರಿದ್ದರು. ತಕ್ಷಣದಲ್ಲಿ ಕಾರ್ಯಪ್ರವೃತ್ತರಾದ  ರಿವರ್ ಲೈಫ್ ಸೇವರ್ ಗಳು ಸುಮಾರು 40  ಪ್ರವಾಸಿಗರನ್ನು ರಕ್ಷಿಸಿದ್ದಾರೆ.

ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಟ್ವೀಟ್ ಮಾಡಿದ್ದು ಜನರ ಜೀವ ರಕ್ಷಣೆ ಮಾಡಿದ ರಿವರ್ ಲೈಫ್ ಸೇವರ್ ಗಳಿಗೆ  ಧನ್ಯವಾದ ಸಲ್ಲಿಸಿದ್ದಾರೆ.

ಪ್ರಹ್ಲಾದ ಜೋಶಿಯವರನ್ನು ಹೊಗಳಿದ ರಾಜಸ್ಥಾನ್ ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button