Vikalachetanara Day
Cancer Hospital 2
Bottom Add. 3

*ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ನೀಲಿ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೆ ಎಂದು ಆರೋಪ ಮಾಡಿರುವ ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ನೀಡಿದ ಅವರು, ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್‌ ಗಳನ್ನು ಇಟ್ಟಿದ್ದೇ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಮಾದ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ. ಕುಮಾರಸ್ವಾಮಿ ಅವರಿಗೆ ನೀವೆ ಉತ್ತರಿಸಿ ಎಂದರು.

ಕುಮಾರಸ್ವಾಮಿ ಪದೇ, ಪದೇ ನಿಮ್ಮ ಮೇಲೆ ಸರಣಿ ಆರೋಪಗಳನ್ನು ಮಾಡುತ್ತಿರುವುದರ ಹಿಂದಿನ ಕಾರಣವೇನು ಎಂದು ಕೇಳಿದಾಗ “ಅವರು ದೊಡ್ಡವರು, ಏನೇ ಹೇಳಿದರು ನಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಬಳಸುತ್ತಾರೆ ಎಂದು ನಾನು ಏಕವಚನ ಬಳಸುವುದಿಲ್ಲ. ಅದು ಅವರ ಸಂಸ್ಕೃತಿ. ಅವರು ಕುಳಿತಿದ್ದ ಸ್ಥಾನ ದೊಡ್ಡದು, ಅದಕ್ಕೆ ಅವರಿಗೆ ಗೌರವ ಕೊಡುತ್ತೇನೆ” ಎಂದು ಹೇಳಿದರು.

ಪ್ರತಿದಿನ‌ ವೈಯಕ್ತಿಕ ದಾಳಿ ನಡೆಸುತ್ತಲೇ ಇದ್ದಾರಲ್ಲ ಎಂದಾಗ, “ಇದರಿಂದ ಅವರಿಗೆ ಯಶಸ್ಸು ದೊರೆಯುವುದಿದ್ದರೆ ದೊರೆಯಲಿ” ಎಂದು ಹಾರೈಸಿದರು.

Bottom Add3
Bottom Ad 2

You cannot copy content of this page