Vikalachetanara Day
Cancer Hospital 2
Bottom Add. 3

*ಇವರ ಹೇಳಿಕೆ ಪಟೇಲರ ಕತೆ ಎರಡೂ ಒಂದೇ ಎಂದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ನುಡಿದ ಭವಿಷ್ಯದ ವಿಚಾರವಾಗಿ ಮತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇಬ್ಬರು ವೈರಿಗಳು ಒಂದಾಗಿ ಸರ್ಕಾರ ಬೀಳುತ್ತದೆ ಎಂದು ಒಂದೊಂದು ದಿನಾಂಕ ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸರ್ಕಾರದ ಪತನದ ಬಗ್ಗೆ ವಿರೋಧ ಪಕ್ಷದ ನಾಯಕರ ಹೇಳಿಕೆಗಳ ಬಗ್ಗೆ ಕೇಳಿದಾಗ “ಈ ಹಿಂದೆ ಜೆ.ಹೆಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ಸದನದಲ್ಲಿ ಒಂದು ಕತೆ ಹೇಳಿದ್ದರು. ಅದೇನೋ ಬಿದ್ದು ಹೋಗುತ್ತೆ ಅಂತ. ನೀವು ಅವರ ಭಾಷಣವನ್ನು ಒಮ್ಮೆ ಓದಿ. ಈಗ ಇಬ್ಬರು ವೈರಿಗಳು ಒಂದಾಗಿ ಸರ್ಕಾರ ಬೀಳುತ್ತದೆ ಎಂದು ಒಂದೊಂದು ದಿನಾಂಕ ನೀಡುತ್ತಿದ್ದಾರೆ. ಇವರ ಹೇಳಿಕೆ ಪಟೇಲರ ಕತೆ ಎರಡೂ ಒಂದೇ” ಎಂದರು.

ಇದೇ ವೇಳೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮೇಲೆ ಇಡಿ ದಾಳಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ವಿಚಾರವಾಗಿ ನನಗೆ ಹೆಚ್ಚಿನ ವಿಚಾರ ಗೊತ್ತಿಲ್ಲ ಎಂದು ತಿಳಿಸಿದರು.


Bottom Add3
Bottom Ad 2

You cannot copy content of this page