LatestUncategorized

*ನುಡಿದಂತೆ ನಡೆಯುವುದೇ ಕಾಂಗ್ರೆಸ್ ಶಕ್ತಿ; ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನುಡಿದಂತೆ ನಡೆಯುವುದೇ ಕಾಂಗ್ರೆಸ್ ಶಕ್ತಿ. ಬಿಜೆಪಿ, ಜೆಡಿಎಸ್ ನವರು ನಮ್ಮ ಯೋಜನೆಗಳಿಗೆ ಟಿಕೆ ಮಾಡುತ್ತಿದ್ದಾರೆ. ಟೀಕೆ ಮಾಡುವವರು ಮಾಡಲಿ. ನಾವು ಯಶಸ್ವಿಯಾಗಿ ಯ್ಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನಿಂದು ಉಜ್ಜಯನಿ ಮಹಾಕಾಲೇಶ್ವರನ ಪೂಜೆ ಮಾಡಿ ಬಂದಿದ್ದೇನೆ. ಜನರನ್ನು ಸಂತೋಷಪಡಿಸುವುದೇ ನಿಜವಾದ ಈಶ್ವರನ ಪೂಜೆ. ನೆರೆದ ಜನರಲ್ಲಿಯೂ ಈಶ್ವರನನ್ನು ಕಾಣುತ್ತಿದ್ದೇನೆ. ಇದೊಂದು ಪವಿತ್ರವಾದ ದಿನ ಎಂದರು.

ಬಿಜೆಪಿ, ಜೆಡಿಎಸ್ ನವರು ನಮ್ಮ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಟೀಕೆಗಳು ಬೇಗ ಸಾಯುತ್ತವೆ. ಬಿಜೆಪಿಯವರು ಏನೇ ಮಾತನಾಡಿದರೂ ಏನೂ ಆಗಲ್ಲ. ಅವರು ನೀಡಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದರು? ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಬೇಕು ಎಂದು ಹೇಳಿದರು.

Home add -Advt

ಇನ್ನು ಡಿ.ಕೆ.ಶಿವಕುಮಾರ್ ಅವರು ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ರಾಜಸ್ಥಾನಿ ಪೇಟ ತೊಟ್ಟು ಆಗಮಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

https://www.pragativahini.com/shakti-scemefree-buskarnatakasiddaramaiah-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button