Latest

ಡಿಕೆಶಿ ಕಲೆಕ್ಷನ್ ಗಿರಾಕಿ; ಕೆಪಿಸಿಸಿ ವೇದಿಕೆಯಲ್ಲೇ ಕಾಂಗ್ರೆಸ್ ನಾಯಕರಿಂದ ಚರ್ಚೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತೆ ಸಾಬೀತಾಗುತ್ತಿದ್ದು, ಇದೀಗ ಕೆಪಿಸಿಸಿ ವೇದಿಕೆಯಲ್ಲಿಯೇ ನಾಯಕರಿಬ್ಬರು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಚರ್ಚೆ ನಡೆಸಿರುವುದು ಬಹಿರಂಗವಾಗಿದೆ.

ರಾಜ್ಯ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕೆಪಿಸಿಸಿ ವೇದಿಕೆಯಲ್ಲಿಯೇ ರಾಜ್ಯ ಕಾಂಗ್ರೆಸ್ ನಲ್ಲಿ ಪರ್ಸಂಟೇಜ್ ಪಡೆದುಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಮೊದಲು 6-8 ಪರ್ಸಂಟೇಜ್ ಇತ್ತು ಈಗ ಡಿ.ಕೆ ಬಂದು 12 ಪರ್ಸೆಂಟ್ ಮಾಡಿದ್ದಾರೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದು ಸಲೀಂ ಹೇಳಿದ್ದಾರೆ.

ಅಲ್ಲದೇ ಡಿ.ಕೆ.ಶಿ ಹುಡುಗರ ಬಳಿಯೇ 50-100 ಕೋಟಿ ಇದೆ. ಇನ್ನು ಡಿ.ಕೆ.ಶಿ ಬಳಿ ಎಷ್ಟಿರಬಹುದು? ಸಿದ್ದರಾಮಯ್ಯ ಖಡಕ್ ವ್ಯಕ್ತಿ. ಆದರೆ ಡಿ.ಕೆ.ಶಿ ಮಾಧ್ಯಮದ ಮುಂದೆ ಮಾತನಾಡುವಾಗಲೂ ತಡಬಡಾಯಿಸುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಗ್ರಪ್ಪ, ನಾವೆಲ್ಲರೂ ಪಟ್ಟು ಹಿಡಿದು ಡಿ.ಕೆ.ಶಿಯನ್ನು ಅಧ್ಯಕ್ಷರನ್ನಾಗಿ ಮಾಡಿದೆವು. ಆದರೆ ಈಗ ನಮ್ಮ ಬುಡಕ್ಕೆ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷದ ವೇದಿಕೆಯಲ್ಲಿಯೇ ಇಬ್ಬರು ಕೈ ನಾಯಕರು ನಡೆಸಿರುವ ಈ ಚರ್ಚೆ ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಪುಟಗೋಸಿ ವಿಪಕ್ಷ ನಾಯಕನ ಹುದ್ದೆ ಎಂದ ಹೆಚ್ ಡಿಕೆ; ಕುಮಾರಸ್ವಾಮಿಗೆ ಸಿದ್ದು ಖಡಕ್ ಗುದ್ದು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button