

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಮುಂಬೈ ವಿಮಾನ ಹತ್ತಿದ್ದಾರೆ.
ಮುಂಬೈನ್ ಸೋಫಿಟೆಲ್ ಹೊಟೆಲ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಮನವೊಲಿಸಿ ಕರೆತರಲು ಶಿವಕುಮಾರ ಹೊರಟಿದ್ದಾರೆ.
ಭಾರಿ ಬಂದೋಬಸ್ತ್ ಏರ್ಪಡಿಸಿರುವ ಹೊಟೆಲ್ ಒಳಗೆ ಶಿವಕುಮಾರ ಅವರನ್ನು ಬಿಟ್ಟುಕೊಡಲಾಗುತ್ತದೆಯೋ ಕಾದು ನೋಡಬೇಕಿದೆ.
ಹೊಟೆಲ್ ನಲ್ಲಿ ಕಾಂಗ್ರೆಸ್ ನ 7 ಹಾಗೂ ಜೆಡಿಎಸ್ ನ 3 ಶಾಸಕರಿದ್ದಾರೆ. ಕಾಂಗ್ರೆಸ್ ನ ರಾಮಲಿಂಗಾ ರಡ್ಡಿ ಮತ್ತು ಮುನಿರತ್ನ ಬೆಂಗಳೂರಿನಲ್ಲೇ ಇದ್ದಾರೆ.
ಅತೃಪ್ತರಿಗೆ ಸಚಿವಸ್ಥಾನ ನೀಡುವುದಕ್ಕಾಗಿ ಮೈತ್ರಿ ಸರಕಾರದ ಎಲ್ಲ ಸಚಿವರೂ ರಾಜಿನಾಮೆ ನೀಡಿದ್ದಾರೆ. ಹಾಗಾಗಿ ಆದ್ಯತೆಯ ಮೇಲೆ ಅತೃಪ್ತರನ್ನು ಸೇರಿಸಿಕೊಂಡು ಸಚಿವಸಂಪುಟ ಪುನಾರಚಿಸಲು ಉಭಯ ಪಕ್ಷಗಳೂ ನಿರ್ಧರಿಸಿವೆ.
24 ಗಂಟೆಯೊಳಗೆ ಶಾಸಕರು ವಾಪಸ್ ಬರದಿದ್ದರೆ ರಾಜಿನಾಮೆ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಡುವು ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ ನಾಯಕರು ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ