Kannada NewsKarnataka NewsLatest

ಸಚಿವ ಡಿಕೆಶಿ, ಶಿವಶಂಕರ ರೆಡ್ಡಿ ನಾಳೆ ಬೆಳಗಾವಿಗೆ

ಜಲಸಂಪನ್ಮೂಲ ಸಚಿವರ ಜಿಲ್ಲಾ ಪ್ರವಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಜ್ಯ ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ  ಡಿ.ಕೆ.ಶಿವಕುಮಾರ್ ಅವರು ಜೂನ್ ೨೨ ರಂದು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ವಿವಿಧ ಬ್ಯಾರೇಜ್‌ಗಳ ಪರಿಶೀಲನೆ ನಡೆಸಲಿದ್ದಾರೆ.
ಜೂನ್ ೨೨ ರಂದು ಮಧ್ಯಾಹ್ನ ೧೨ ಗಂಟೆಗೆ ಚಿಕ್ಕೋಡಿಗೆ ಆಗಮಿಸುವರು. ಮಧ್ಯಾಹ್ನ ೧ ರಂದು ರಾಜಾಪುರ ಬ್ಯಾರೇಜ್, ೧-೩೦ ಗಂಟೆಗೆ ಕಲ್ಲೋಲ್ ಬ್ಯಾರೇಜ್, ೨ ಗಂಟೆಗೆ ಮಂಜರಿ ಬ್ಯಾರೇಜ್, ೨-೩೦ ಗಂಟೆಗೆ ಉಗರ್ ಬ್ಯಾರೇಜ್ ಹಾಗೂ ೩-೩೦ ಗಂಟೆಗೆ ಹಿಪ್ಪರಗಿ ಬ್ಯಾರೇಜ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ೬-೩೦ ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಕೃಷಿ ಸಚಿವ:

ರಾಜ್ಯ ಕೃಷಿ ಸಚಿವ  ಎನ್. ಹೆಚ್.ಶಿವಶಂಕರ ರೆಡ್ಡಿ ಜೂನ್ ೨೨ ರಂದು ಮುಂಜಾನೆ ೧೧-೧೫ ಗಂಟೆಗೆ ರಾಮದುರ್ಗ ಅತಿಥಿ ಗೃಹಕ್ಕೆ ಆಗಮಿಸುವರು. ೧೧-೪೫ಕ್ಕೆ  ಹೇಮರೆಡ್ಡಿ ಮಲ್ಲಮನ ನೂತನ ದೇವಸ್ಥಾನ ಉದ್ಘಾಟನೆ ಕಳಸಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ ೨-೩೦ ಗಂಟೆಗೆ ರಾಮದುರ್ಗ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುವರು. ನಂತರ ಮಧ್ಯಾಹ್ನ ೩ ಗಂಟೆಗೆ ಯರಗಟ್ಟಿಗೆ ಆಗಮಿಸುವರು. ೩-೩೦ ಗಂಟೆಗೆ ಕೃಷಿ ಯಂತ್ರಧಾರೆ ಯೋಜನೆಯಡಿ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಭೇಟಿ ನೀಡುವರು.
ಸಂಜೆ ೪-೩೦ ಗಂಟೆಗೆ ಕಡಬಿ ಗ್ರಾಮದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕೈಗೊಂಡ ರೈತನ ಕ್ಷೇತ್ರಕ್ಕೆ ಭೇಟಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ ೬-೦೫ ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button