*ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಚಿನ್ನದಂಗಡಿ ಮಾಲಕಿಗೆ ಮಹಿಳೆಯಿಂದ ಕೋಟಿ ಕೋಟಿ ವಂಚನೆ: FIR ದಾಖಲು*
ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಮಹಿಳೆಯೊಬ್ಬಳು ಚಿನ್ನದ ಅಂಗಡಿ ಮಾಲಕಿಗೆ ಕೋಟಿ ಕೋಟಿ ಹಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರ್.ಆರ್.ನಗರದ ನಿವಾಸಿ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಐಶ್ವರ್ಯಾ ಗೌಡ ತಾನು ಡಿ.ಕೆ.ಸುರೇಶ್ ಸಹೋದರಿ ಎಂದು ವರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲಕಿ ವನಿತಾ ಐತಾಳ್ ಅವರನ್ನು ಪರಿಚಯಿಸಿಕೊಂಡು, ಬಳಿಕ ಡಿ.ಕೆ.ಸುರೇಶ್ ರಾಜಕಾರಣಿ ಮಾತ್ರವಲ್ಲ ಓರ್ವ ಉದ್ಯಮಿ ಕೂಡ. ನನಗೆ ಹಲವು ರಾಜಕಾರಣಿಗಳ ಪರಿಚಯವಿದೆ. ನಿಮಗೆ ಉದ್ಯಮಕ್ಕೆ ಸಹಾಯ ಮಾಡುತ್ತೇನೆ ಎಂದು ಬರೋಬ್ಬರಿ 9.14 ಕೋಟಿ ರೂ ಚಿನ್ನ ಪಡೆದು ವಂಚಿಸಿದ್ದಾಳೆ.
9.14 ಕೋಟಿ ರೂ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ಖರಿದಿಸಿರುವ ಐಶ್ವರ್ಯಾ ಗೌಡ ವನಿತಾ ಐತಾಳ್ ಅವರಿಗೆ ಹಂತ ಹತವಾಗಿ ವಂಚನೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ಐಶ್ವರ್ಯಾ ಗೌಡ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ