ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಸಮರ ಇದೀಗ ಕೋರ್ಟ್ ಮೆಟ್ಟಿಲೇರಿದೆ.
ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ರೂಪಾ ಮೌದ್ಗಿಲ್ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ರೂಪಾ ಮೌದ್ಗಿಲ್, ತನ್ನ ಖಾಸಗಿ ಫೋಟೋ, ಫೋನ್ ನಂಬರ್ ಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ನೂರಾರು ಅಪರಿಚಿತ ಕರೆಗಳು ಬರುತ್ತಿವೆ. ಸಿವಿಲ್ ಸರ್ವಿಸ್ ನಿಯಮಾವಳಿ ಪ್ರಕಾರ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸರಿಗೂ ದೂರು ನೀಡಿದ್ದೇನೆ. ಸರ್ಕಾರ ಸುತ್ತೋಲೆ ಹೊರಡಿಸಿದರೂ ರೂಪಾ ಮಾಧ್ಯಗಳ ಮುಂದೆ, ಸಾರ್ವಜನಿಕವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.
ಹಾಗಾಗಿ ರೂಪಾ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ.
*ಕೌಟುಂಬಿಕ ಮೌಲ್ಯ, ಕುಟುಂಬದ ಉಳಿವಿಗಾಗಿ ಹೋರಾಟ; ಅಂತಹ ಮಹಿಳೆಯರಿಗೆ ಧ್ವನಿಯಾಗಿ ಎಂದ ಡಿ.ರೂಪಾ*
https://pragati.taskdun.com/d-rooparohini-sindhurifacebook-post/
*ಇದು ಬಿಜೆಪಿ ಸಿದ್ಧಾಂತವೇ? ಜೆ.ಪಿ.ನಡ್ಡಾಗೆ ತಿರುಗೇಟು ನೀಡಿದ ಸಿದ್ದರಾಮಯ್ಯ*
https://pragati.taskdun.com/siddaramaiahj-p-naddac-t-ravireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ