*ಹೊಸ ಪಕ್ಷದ ಮೂಲಕ ತಮಿಳು ಸೂಪರ್ ಸ್ಟಾರ್ ‘ದಳಪತಿ’ ರಾಜಕೀಯಕ್ಕೆ ಎಂಟ್ರಿ*
ಪ್ರಗತಿವಾಹಿನಿ ಸುದ್ದಿ: ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈ ನಲ್ಲಿ ಈಗ ನೂತನ ಪಕ್ಷ ಘೋಷಣೆ ಮಾಡುವ ಮೂಲಕ ರಾಜಕೀಯ ಪ್ರವೇಶವನ್ನು ಖಾತ್ರಿಪಡಿಸಿದ್ದಾರೆ. “ತಮಿಳಗ ವೆಟ್ರಿ ಕಳಗಂ” ಎಂಬ ಹೆಸರಿನ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ಇದೇ ವೇಳೆ ವಿಜಯ್, ಜನಾಂದೋಲನ ಎಂಬ ಘೋಷಣೆ ಮೂಲಕ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹಲವರಿಂದ ರಾಜಕೀಯ ಪಾಠ ಕಲಿತುಕೊಂಡು ಬಂದಿದ್ದೇನೆ. ಸದ್ಯದ ರಾಜಕೀಯದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಲು ಬಯಸಿದ್ದೇನೆ. ರಾಜಕೀಯ ಇದೊಂದು ವೃತ್ತಿಯಲ್ಲ; ಜನರ ಸೇವೆ ಮಾಡುವುದಕ್ಕೆ ಸಿಕ್ಕ ಅವಕಾಶ. ಮುಂದೆ ಎದುರಾಗುವ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಸ್ಪರ್ಧೆ ಮಾಡುವುದಿಲ್ಲ ಎಂದು ಇದೇ ವೇಳೆ ಸೂಪರ್ ಸ್ಟಾರ್ ವಿಜಯ್ ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ