Kannada NewsKarnataka NewsLatest

*ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ದಲಿತ ಸಂಘರ್ಷ ಸಮಿತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಆನಂದ ತಾಯಗೋಳ ಸೋಮವಾರ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ಜನಜಾಗೃತಿಗಾಗಿ ಶೋಷಿತ ಸಮಾಜದ ಪರವಾಗಿರುವ ಪಕ್ಷಕ್ಕೆ ನಾವು ಬೆಂಬಲಿಸಲಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಸಿ ಬೆಳೆಸಿಕೊಂಡು‌ ಹೋಗುತ್ತದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎಂದು ಹೇಳಿಕೆ ಕೊಡುವ ಬಿಜೆಪಿ ದಲಿತರ ವಿರೋಧಿ ಪಕ್ಷವಾಗಿದೆ. ಡಾ.‌ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ದಾಂತವುನ್ನು ಎತ್ತಿ ಹಿಡಿಯ ಬೇಕಿದ್ದ ಬಿಜೆಪಿಯವರ ಹೇಳಿಕೆಗಳು ನಮ್ಮ ಸಮಾಜದವರಿಗೆ ಮಾಡಿದ ಅಪಮಾನ ಎಂದರು.

Home add -Advt

ಮಲ್ಲೇಶ ಚೌಗುಲೆ, ಸುರೇಶ ಸಣ್ಣಕ್ಕಿ, ಗೀತಾ ಸಣ್ಣಕ್ಕಿ, ಬಾಳೇಶ ಬನಹಟ್ಟಿ, ಮಂಜುನಾಥ ‌ಅಣ್ಣಯ್ಯ ಸೇರಿದಂತೆ ‌ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button