Karnataka News

ಬೆಳಗಾವಿಯಲ್ಲಿ ಮನರಂಜಿಸಿದ ಸಂಗೀತ ನೃತ್ಯ ಕಾರ್ಯಕ್ರಮ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಸಂಗೀತ ಮನಸ್ಸಿಗೆ ನೆಮ್ಮದಿ ಕೊಟ್ಟರೆ, ನೃತ್ಯ ಮನರಂಜನೆಯೊಂದಿಗೆ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗಿದೆ. ಹೀಗಾಗಿ ಇಂದಿನ ಯುವ ಪೀಳಿಗೆಯನ್ನು ಸಾಹಿತ್ಯ ಸಂಗೀತ ನೃತ್ಯದತ್ತ ಕರೆ ತರಬೇಕಾಗಿದೆ ಎಂದು ಶಿಕ್ಷಣ ತಜ್ಞೆ ಎಂಜಲಿನಾ ಗ್ರೆಗರಿ ಅಭಿಪ್ರಾಯಪಟ್ಟರು.

ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಜರುಗಿದ ಸಂಧ್ಯಾ ರಾಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಕಲೆ ಎಲ್ಲರಲ್ಲಿ ಇದ್ದರೂ ಕೆಲವರು ಮಾತ್ರ ಕಲಾವಿದರಾಗಿ ಪ್ರಸಿದ್ಧಿ ಪಡೆಯುತ್ತಾರೆ. ಆದರೆ ಕಲಾರಾಧನೆ ನಿರಂತರವಾಗಿರಲಿ. ಕಲೆ ಸಾಹಿತ್ಯ ಬೆಳೆಯುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ವಾಲಿ ಅವರು ಗಾನಸುದೆ ಹರಿಸಿದರು. ಕಲಾವಿದೆ ಶಾಂತಾ ಆಚಾರ್ಯ ಅವರಿಂದ ಕಾಂತಾರ ನೃತ್ಯ ಜರುಗಿತು.

ಕಾರ್ಯಕ್ರಮದಲ್ಲಿ ರೋಹಿಣಿ ಗಂಗಾಧರಯ್ಯ ಮಾತನಾಡಿ, ನಮ್ಮ ಭಾರತೀಯ ಪರಂಪರೆಯ ಕಲೆ ಸಾಹಿತ್ಯ ಸಂಸ್ಕøತಿ ಪರಂಪರೆ ಬೆಳೆಯಲು ನಮ್ಮ ಮಕ್ಕಳನ್ನು ನಾವು ಬೆಳೆಸಬೇಕಿದೆ. ತನ್ಮೂಲಕ ನಮ್ಮ ದೇಶದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ವೀಣಾ ಚಿನ್ನನ್ನವರ ವಹಿಸಿ ಮಾತನಾಡಿದರು.
ಲಿಂಗಾಯತ ಮಹಿಳಾ ಸಮಾಜದ ಕಾರ್ಯದರ್ಶಿ ಗೀತಾ ಗುಂಡುಕಲ್ಲಿ ಕಾರ್ಯಕ್ರಮ ನಿರ್ವಹಿಸಿದರು.

 

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷಿ ಶೈಲಜಾ ಭಿಂಗೆ ಆಶಾ ಪಾಟೀಲ್ ,ಜ್ಯೋತಿ ಬಾವಿಕಟ್ಟಿ, ಜ್ಯೋತಿ ಬದಾಮಿ ಕಾರ್ಯದರ್ಶಿ ಮಾಧುರಿ ಉಪ್ಪಿನ ಲಿಂಗಾಯತ ಮಹಿಳಾಸಮಾಜದ ಸದಸ್ಯರು ಉಪಸ್ಥಿತರಿದ್ದರು. ಚಂದಾ ಚೌಗಲೆ ವಂದಿಸಿದರು.

ಬಿಜಗರಣಿ ಗ್ರಾಮದ ನೂತನ ಶ್ರೀ ಲಕ್ಷ್ಮೀ ದೇವಿ ಮಂದಿರದ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button