
ಪ್ರಗತಿವಾಹಿನಿ ಸುದ್ದಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿದರೂ ನಟ ದರ್ಶನ್ ದುರಹಂಕಾರ ಮಾತ್ರ ಕಡಿಮೆಯಾಗಿಲ್ಲ. ಪೊಲೀಸರ ಮಧ್ಯದಲ್ಲಿಯೇ ದುರ್ನಡತೆ ತೋರಿರುವ ಘಟನೆ ನಡೆದಿದೆ.
ಬಳ್ಳಾರಿ ಜೈಲಿನಲ್ಲಿ ಲಾಯರ್ ಭೇಟಿಗೆ ಬಂದಿದ್ದ ವೇಳೆ ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ದರ್ಶನ್ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಪೊಲೀಸರ ಮಧ್ಯೆ ಇದ್ದರೂ ದುರ್ನಡತೆ ತೋರಿದ್ದು, ದರ್ಪ, ದುರಹಂಕಾರ ಇನ್ನೂ ಕಡಿಮೆಯಾದಂತಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ನ್ಯಾಯಾಂಗ ಬಂಧನ ದಿನೇ ದಿನೆ ವಿಸ್ತರಣೆಯಾಗುತ್ತಿದೆ. ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ದರ್ಶನ್ ಕ್ರೌರ್ಯದ ಅನಾವರಣವೇ ಇದೆ. ಒನ್ನೊಂದೆಡೆ ಪತ್ನಿ ವಿಜಯಲಕ್ಷ್ಮಿ ಜೈಲಿನಿಂದ ಪತಿಯನ್ನು ಬಿಡುಗಡೆ ಮಾಡಿಸಲೆಂದು ದೇವಾಲಯಗಳ ಮೇಲೆ ದೇವಾಲಯಗಳಿಗೆ ಭೇಟಿ ನೀಡುತ್ತಾ, ಪೂಜೆ- ಹೋಮಗಳನ್ನು ಮಾಡಿಸುತ್ತಿದ್ದಾರೆ. ಇಷ್ಟೆಲ್ಲ ಆದರೂ ಸ್ವಲ್ಪವೂ ದರ್ಶನ್ ಮನ:ಸ್ಥಿತಿ ಮಾತ್ರ ಬದಲಾವಣೆಯಾದ ಯಾವ ಲಕ್ಷಣಗಳು ಕಾಣುತ್ತಿಲ್ಲ. ಕಿಂಚಿತ್ತೂ ಪಶ್ಚಾತ್ತಾಪವೂ ಇದ್ದಂತೆ ಇಲ್ಲ. ದರ್ಪ ದುರಹಂಕಾರ ಎಲ್ಲೆ ಮೀರಿದ್ದು, ಮಾಧ್ಯಮಗಳನ್ನು ಕಂಡು ಎರಡೂ ಕೈಗಳಿಂದ ಮಧ್ಯದ ಬೆರಳು ತೋರಿಸಿ ನಡೆದು ಹೋಗಿದ್ದಾನೆ. ಜೈಲು ಸೇರಿ ಹೊರಬರಲಾಗದೇ ಪರದಾಡುತ್ತಿದ್ದರೂ ತಾನು ಮಾಡಿದ್ದೇ ಸರಿ ಎಂಬ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ