Latest

ದಸರಾ ಆಚರಣೆಗೆ ಕೋವಿಡ್ ಹೊಸ ಗೈಡ್ ಲೈನ್; ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಭೀತಿ ನಡುವೆಯೇ ದಸರಾ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಇದೀಗ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅಕ್ಟೋಬರ್ 7ರಿಂದ 15ರವರೆಗೆ ದಸರಾ ಆಚರಣೆ ನಡೆಯಲಿದ್ದು, ವಿಶ್ವ ವಿಖ್ಯಾತ ಮೈಸೂರು ದಸರಾ ಹಾಗೂ ಇತರ ಜಿಲ್ಲೆಗಳಿಗೂ ಸರಳ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಮಾರ್ಗಸೂಚಿ ಅಂಶಗಳು:

* ಕೋವಿದ್ ಹಿನ್ನೆಲೆಯಲ್ಲಿ ಸರಳ ಭಕ್ತಿಪೂರ್ವಕ ದಸರಾ ಹಬ್ಬ ಆಚರಣೆ ಮಾಡಬೇಕು
* ಕೆಲ ನಿರ್ಬಂಧಕ್ಕೂ ಮುನ್ನ ಜಿಲ್ಲಾಡಳಿತದಿಂದ ವ್ಯಾಪಕ ಪ್ರಚಾರ ಅಗತ್ಯ
* ಮೈಸೂರು ದಸರಾ ಹೊರತಾಗಿ ಉಳಿದ ಜಿಲ್ಲೆಗಳಲ್ಲಿ ಒಮ್ಮೆ 400 ಜನರು ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ
* ದೈಹಿಕ, ಸಾಮಾಜಿಕ ಅಂತರವಿಲ್ಲದ ಕಾರ್ಯಕ್ರಮಕ್ಕೆ ನಿಷೇಧ
* ಸರ್ಕಾರದ ಹೊರಡಿಸಿದ ಕೋವಿಡ್ ನಿಯಮಗಳು ಕಡ್ಡಾಯ ಪಾಲನೆಯಾಗಬೇಕು
* ಅಕ್ಟೋಬರ್ 7ರಂದು ಚಾಮುಮ್ಡಿ ಬೆಟ್ಟದಲ್ಲಿ ಮೈಸೂರು ದಸರಾ ಉದ್ಘಾಟನೆ
* ಜನರು ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯ
* ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 100 ಜನರಿಗೆ ಅನುಮತಿ
* ವರ್ಚುವಲ್ ಮೂಲಕ ಜಂಬೂಸವಾರಿ ವೀಕ್ಷಣೆಗೆ ಅವಕಾಶ
* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಜನರಿಗೆ ಅವಕಾಶ
* 8 ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮ
* ಜಂಬೂಸವಾರಿ, ಪಂಜಿನ ಕವಾಯತಿಗೆ 500 ಜನರಿಗೆ ಅವಕಾಶ

ಮತ್ತಷ್ಟು ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button