Kannada NewsLatest

ದಸರಾ ಹಿನ್ನೆಲೆಯಲ್ಲಿ ಯಲ್ಲಮ್ಮಾ ದೇವಿ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ದಸರಾ ಹಿನ್ನೆಲೆಯಲ್ಲಿ ಶ್ರೀ ಯಲ್ಲಮ್ಮಾದೇವಿ ದೇವಸ್ಥಾನಕ್ಕೆ ಅಕ್ಟೋಬರ್ 6ರಿಂದ ಅಕ್ಬೋರ್ 15ರವರೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೆಯ ಮುಖ್ಯ ದಿನಗಳಾದ ದಿನಾಂಕ 6, 8, 10, 12 ಹಾಗೂ 15 ರಂದು ಬಸ್ ವ್ಯವಸ್ಥೆ ಇರಲಿದ್ದು, ಕೋವಿಡ್ ನಿಯಮಾವಳಿಯಂತೆ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಲಾಗುವುದು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ವಾಹನಗಳನ್ನು ಬೆಳಗಾವಿ ಕೇಂದ್ರ/ನಗರ ಬಸ್ ನಿಲ್ದಾಣ ಹಾಗೂ ಯಲ್ಲಮ್ಮಾಗುಡ್ಡದಿಂದ ಬೆಳಗಾವಿಗೆ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಇ-ಆಡಳಿತದಲ್ಲಿ ತಂತ್ರಾಂಶ ಮತ್ತು ದತ್ತಾಂಶ ಸುರಕ್ಷತೆಗೆ ಒತ್ತು ನೀಡಲು ಸಿಎಂ ಸೂಚನೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button