Latest

ಲಲಿತ್ ಮೋದಿ ಜೊತೆ ಡೇಟಿಂಗ್; ಸುಷ್ಮಿತಾ ಸೇನ್ ತಂದೆ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಮುಂಬೈ: ಐಪಿಎಲ್ ಮಾಜಿ ಚೇರ್ಮನ್  ಲಲಿತ್ ಮೋದಿ ಜೊತೆ ಡೇಟಿಂಗ್ ಪ್ರಕರಣದ ಮೂಲಕ ಪ್ರಸ್ತುತ ಭಾರೀ ಪ್ರಚಲಿತದಲ್ಲಿರುವ ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಂದೆ ಇದೀಗ ಮಗಳ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

“ನಾನು ಅವಳೊಂದಿಗೆ ಶುಕ್ರವಾರವಷ್ಟೇ ಫೋನ್ ನಲ್ಲಿ ಮಾತನಾಡಿದ್ದೇನೆ.  ಆಕೆ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುವ ವಿಷಯ ನನಗೆ ಹೇಳಿರಲಿಲ್ಲ. ಸೋಷಿಯಲ್ ಮೀಡಿಯಾದಿಂದಲೇ ಲಲಿತ್ ಮೋದಿ ಟ್ವೀಟ್ ನಂತರ ಮಾಧ್ಯಮದವರು ಪ್ರಶ್ನಿಸಿದಾಗಲೇ ನನಗೂ ವಿಷಯ ತಿಳಿದಿದೆ ” ಎಂದು  ಸುಷ್ಮಿತಾ ತಂದೆ ಶುಬೀರ್ ಸೇನ್ ಹೇಳಿಕೊಂಡಿದ್ದಾರೆ.

“ಸದ್ಯ ಸುಷ್ಮಿತಾ ಲಂಡನ್ ನಲ್ಲಿ ಅವರ ಮಿತ್ರರೊಂದಿಗೆ ವಿಹರಿಸಲು ಹೋಗಿದ್ದು ಆಕೆ ಕುಟುಂಬದವರೊಂದಿಗೆ ಆ ವಿಷಯ ಮಾತನಾಡಿಲ್ಲ. ಲಲಿತ್ ಅವರನ್ನು ಅಳಿಯ ಎಂದು ಒಪ್ಪಿಕೊಂಡ ನಂತರವೇ ಪ್ರತಿಕ್ರಿಯಿಸುವೆ” ಎಂದು ಶುಬೀರ್ ಸೇನ್ ಹೇಳಿದ್ದಾರೆ.

ಯುವತಿಗಾಗಿ ಯುವಕನನ್ನೇ ಕೊಂದ ಕಿರಾತಕರು

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button