ಹೊಟೆಲ್ ಉದ್ಯಮಿ ಸೊಸೆ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಇಲ್ಲಿಯ ಪ್ರಥಮ ದರ್ಜೆ ಗುತ್ತಿಗೆದಾರ, ಹೊಟೆಲ್ ಉದ್ಯಮಿ ಜಯಶೀಲ ಶೆಟ್ಟಿ ಅವರ ಸೊಸೆ ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶನಿವಾರ ಮನೆಯ ಕೊಠಡಿಯಲ್ಲಿ ಅವರು ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ. ಕಳೆದ ಜನೆವರಿ ತಿಂಗಳಲ್ಲಿ ಅವರು ಮನೀಷ್ ಶೆಟ್ಟಿ ಜೊತೆ ವಿವಾಹವಾಗಿದ್ದರು. ಮನೀಷ್ ಕೆಲಸದ ನಿಮಿತ್ತ ವಿದೇಶ ಪ್ರವಾಸದಲ್ಲಿದ್ದಾರೆ. Home add -Advt ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. *ಹೃದಯಾಘಾತವಾದಾಗ ತುರ್ತು ಸಂದರ್ಭದಲ್ಲಿ ಏನು ಮಾಡಬೇಕು? ಕೆ.ಎಲ್.ಇ ಆಸ್ಪತ್ರೆಯ ಡಾ.ರಿಚರ್ಡ್ ಸಾಲ್ಡಾನ ಮಾಹಿತಿ*