ದಾವಣಗೆರೆಗೂ ಕಾಲಿಟ್ಟ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಕಬಂದ ಬಾಹು ಚಾಚುತ್ತಿದ್ದು, ಈ ನಡುವೆ ದಾವಣಗೆರೆಯಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ.

ಫ್ರಾನ್ಸ್ ಗೆ ಹೋಗಿಬಂದಿದ್ದ 24 ವರ್ಷದ ಯುವಕ ಕೊರೋನಾ ಪೀಡಿತನಾಗಿದ್ದಾನೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಭೀಳಗಿ ಮಾಹಿತಿ ನೀಡಿದ್ದಾರೆ. ಈತ ದಾವಣಗೆರೆ ‌ಸಿದ್ದವೀರಪ್ಪ ಬಡಾವಣೆ ನಿವಾಸಿ ಎಂದು ತಿಳಿದುಬಂದಿದೆ.

ಈತ ಮಾರ್ಚ್ 17 ರಂದು‌ ಫ್ರಾನ್ಸ್ ನಿಂದ ಅಬುಧಾಬಿ ಮುಖಾಂತರ ಮಾರ್ಚ್‌ 18 ಕ್ಕೆ‌ ದಾವಣಗೆರೆಗೆ ವಾಪಸ್ಸು‌ ಬಂದಿದ್ದ. ಜಿಲ್ಲೆಗೆ ಆಗಮಿಸಿದ ಬೆನ್ನಿಗೆ ಈತನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಮಾರ್ಚ್‌ 25 ರಂದು ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯುವಕನ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು. ಇಂದು ವರದಿ ಕೈಸೇರಿದ್ದು ಯುವಕನಿಗೆ ಕೊರೋನಾ ಇರುವುದು ದೃಢಪಟ್ಟಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button